ಮೈಸೂರು : ಮೈಬಿಲ್ಡ್-೨೦೨೩ ರಿಯಾಲಿಟಿ ಎಕ್ಸ್ಪೋ ಐಶಾರಾಮಿ ಮನೆ ನಿರ್ಮಾಣದ ಕನಸು ಹೊಂದಿರುವ ಎಲ್ಲಾ ವರ್ಗದವರಿಗೂ ಕೈಗೆಟಕುವ ದರದಲ್ಲಿ ಐಶಾರಾಮಿ ವಸ್ತುಗಳನ್ನು ಒದಗಿಸುವ ಬೃಹತ್ ವೇದಿಕೆಯಾಗಿದೆ ಎಂದು ಶಾಸಕ ತನ್ವೀರ್ ಸೇಠ್ ಶ್ಲಾಘಿಸಿದರು.
ಮೈಸೂರಿನಲ್ಲಿ ನಡೆಯುತ್ತಿರುವ ಐದು ದಿನಗಳ ರಿಯಾಲಿಟಿ ಮಹೋತ್ಸವ, ಮೈಬಿಲ್ಡ್ ೨೦೨೩ ಮೇಳಕ್ಕೆ ಭೇಟಿ ನೀಡಿ ಮಾತನಾಡಿದರು.
ಮೇಳದ ಆಕರ್ಷಣೆಯಾಗಿರುವ ಹೌಸ್ ಆಫ್ ನಕ್ಷಾ ಮಳಿಗೆಗೆ ಭೇಟಿ ನೀಡಿ ಅಲ್ಲಿ ಪ್ರದರ್ಶಿಸಲಾಗಿರುಯವ ಅದ್ಭುತ ಆವಿಷ್ಕಾರಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮೈಬಿಲ್ಡ್ ರಿಯಾಲಿಟಿ ಷೋ ರಿಯಲ್ ಎಸ್ಟೇಟ್ ಉತ್ಸಾಹಿಗಳ ಕೇಂದ್ರವಾಗಿ ಮಾರ್ಪಟ್ಟಿದೆ. ವಿಶೇಷವಾಗಿ ವಿನ್ಯಾಸಗೊಳಿಸಿದ ನಕ್ಷಾ ಮಳಿಗೆಯಲ್ಲಿ ಪ್ರದರ್ಶಿಸಿರುವ ಅಡುಗೆ ಮನೆಯ ಒಳಾಂಗಣ ವಿನ್ಯಾಸಗಳು, ಪೀಠೋಪಕರಣಗಳು, ಅಲಂಕಾರಗಳು, ವಾರ್ಡ್ ರೋಬ್‌ಗಳನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದರು. ಮಾತ್ರವಲ್ಲದೇ ನಕ್ಷಾ ಹೋಮ್ಸ್ ಅವರು ನಿರ್ಮಿಸಿದ ವಿವಿಧ ವಿನ್ಯಾಸದ ಮನೆಗಳ ಒಳಾಂಗಣ ವಿನ್ಯಾಸ ಹಾಗೂ ಅಲ್ಲಿ ಅಳವಡಿಸಿರುವ ಪರಿಕರಗಳನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದರು. ಮಾತ್ರವಲ್ಲದೇ ಈ ವಿನ್ಯಾಸಗಳನ್ನು ಎಲ್ಲರಿಗೆ ಕೈಗೆಟಕುವ ದರದಲ್ಲಿ ದೊರೆಯುವಂತೆ ಮಾಡುತ್ತಿರುವುದು ಸಂತೋಷದ ಸಂಗತಿಯಾಗಿದೆ. ನಗರದ ಜನತೆ ಈ ವಿಶೇಷ ಅವಕಾಶ ಬಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.
ಒಳಾಂಗಣ ವಿನ್ಯಾಸಗೊಳಿಸುವಲ್ಲಿ ಉದಯೋನ್ಮುಖ ನಾವೀನ್ಯಕಾರರು ಬಳಸಿದ ರೋಮಾಂಚಕ ಬಣ್ಣದ ಪ್ಯಾಲೆಟ್ ಅನ್ನು ಕಂಡು ಸಂತೋಷಗೊಂಡರು. ಈ ರೀತಿಯ ವಿನ್ಯಾಸಗಳು ಹೊಸದಾಗಿ ನಿರ್ಮಿಸಿದ ಮನೆಗಳಲ್ಲಿ ವಿಶೇಷವಾದ ವಾತಾವರಣ ಹುಟ್ಟುಹಾಕುತ್ತವೆ. ಮಾತ್ರವಲ್ಲದೇ ಅಲ್ಲಿ ವಾಸಿಸುವವರಿಗೆ ವಿಶೇಷ ಚೈತನ್ಯ ಮತ್ತು ಶಕ್ತಿಯನ್ನು ತುಂಬುತ್ತವೆ ಎಂದರು. ಹೌಸ್ ಆಫ್ ನಕ್ಷಾದಲ್ಲಿರುವ ವಸ್ತುಗಳು ನಾವಿನ್ಯತೆಯನ್ನು ಬಯಸುವ ಮನೆಮಾಲೀಕರ ಬೇಡಿಕೆಗಳನ್ನು ಪೂರೈಸುವುದು ಮಾತ್ರವಲ್ಲದೆ ಅವರ ನಿರೀಕ್ಷೆಗಳನ್ನು ಈಡೇರಿಸುತ್ತದೆ ಎಂದು ಹೇಳಿದರು.
ರಿಯಲ್ ಎಸ್ಟೇಟ್ ವಲಯದಲ್ಲಿ ಹೆಸರುವಾಸಿಯಾಗಿರುವ ನಕ್ಷಾ ಹೋಮ್ಸ್, ಗೃಹ ಅಗತ್ಯಗಳನ್ನು ಪೂರೈಸುತ್ತದೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ನಾವೀನ್ಯತೆ ಮತ್ತು ಸೃಜನಶೀಲತೆಯನ್ನು ಉತ್ತೇಜಿಸುವ ಈ ರೀತಿಯ ಪ್ರಯತ್ನಗಳಿಗೆ ನಕ್ಷಾ ಹೋಮ್ಸ್ ವೇದಿಕೆಯಾಗಿದೆ ಎಂದರು.