Sunday, April 20, 2025
Google search engine

Homeರಾಜ್ಯನಮ್ಮ ಜಾತ್ರೆ ಕಾರ್ಯಕ್ರಮ ಡಿ.10 ಮತ್ತು 11ಕ್ಕೆ ಆಯೋಜನೆ: ಡಾ. ಧರಣಿ ದೇವಿ ಮಾಲಗತ್ತಿ

ನಮ್ಮ ಜಾತ್ರೆ ಕಾರ್ಯಕ್ರಮ ಡಿ.10 ಮತ್ತು 11ಕ್ಕೆ ಆಯೋಜನೆ: ಡಾ. ಧರಣಿ ದೇವಿ ಮಾಲಗತ್ತಿ

ಬೆಂಗಳೂರು:  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ,ಕರ್ನಾಟಕ ಸಂಭ್ರಮ -50ರ ಅಂಗವಾಗಿ, ಅನ್ ಬಾಕ್ಸಿಂಗ್ ಬೆಂಗಳೂರು ಇದರ ಭಾಗವಾಗಿ ಆಯೋಜಿಸಿರುವ ನಮ್ಮ ಜಾತ್ರೆ ಜನಪದ ಸಂಭ್ರಮ  ಭಾನುವಾರ ಮತ್ತು ಸೋಮವಾರ ನಡೆಯಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಡಾ. ಧರಣಿ ದೇವಿ ಮಾಲಗತ್ತಿ ತಿಳಿಸಿದ್ದಾರೆ.

ಈ ಮೊದಲು ಈ ಕಾರ್ಯಕ್ರಮ ಡಿಸೆಂಬರ್ 9 ಹಾಗೂ 10ರಂದು ನಿಗದಿಯಾಗಿತ್ತು, ಕನ್ನಡ ಚಲನಚಿತ್ರರಂಗದ ಹಿರಿಯ ನಟಿ ಶ್ರೀಮತಿ ಲೀಲಾವತಿ ಅವರು ನಿಧನರಾದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು  ಒಂದು ದಿನದ ಮಟ್ಟಿಗೆ ಮುಂದೂಡಲಾಗಿದೆ ಎಂದು ಅವರು ಹೇಳಿದ್ದಾರೆ.

ಡಿಸೆಂಬರ್ 10 ಭಾನುವಾರ , ಬೆಳಿಗ್ಗೆ 9:30ಕ್ಕೆ  ಭವ್ಯವಾದ ಮೆರವಣಿಗೆಯ ಮೂಲಕ ನಮ್ಮ ಜಾತ್ರೆ ಕಾರ್ಯಕ್ರಮ ಆರಂಭಿಸಲಾಗುತ್ತದೆ.

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಈ ಮೆರವಣಿಗೆಯನ್ನು ವಿಧಾನಸೌಧದ ಮುಂಭಾಗದಲ್ಲಿ ಉದ್ಘಾಟಿಸಲಿದ್ದಾರೆ. ಉಪಮುಖ್ಯಮಂತ್ರಿಗಳಾದ  ಡಿ ಕೆ .ಶಿವಕುಮಾರ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರು ಉಪಸ್ಥಿತರಿರುತ್ತಾರೆ ಎಂದು ಅವರು ತಿಳಿಸಿದರು

ನಂತರ ಬೆಳಿಗ್ಗೆ 11 ಗಂಟೆಗೆ ರವೀಂದ್ರ ಕಲಾಕ್ಷೇತ್ರ ದಲ್ಲಿ ಜಾನಪದ ಕಲಾ ಪ್ರದರ್ಶನ ,ಆಹಾರ ಮೇಳ, ಗುಡಿ ಮತ್ತು ಕುಶಲ ಕಲೆಗಾರಿಕೆಗಳ ಮಾರಾಟ ಮಳಿಗೆ ಹಾಗೂ ಪ್ರದರ್ಶನವನ್ನು ಸನ್ಮಾನ್ಯ ಮುಖ್ಯಮಂತ್ರಿ  ಸಿದ್ಧರಾಮಯ್ಯನವರು ಉದ್ಘಾಟಿಸುವರು.

RELATED ARTICLES
- Advertisment -
Google search engine

Most Popular