ಚನ್ನಪಟ್ಟಣ: ರಾಜಕಾರಣಿಗಳ ದುಬಾರಿ ಕಾರು ಮತ್ತು ಕರೆಂಟ್ ಕಳವಿನ ವಿಚಾರಕ್ಕೆ ಸಿಗುತ್ತಿರುವ ಪ್ರಚಾರ ಮತ್ತು ಟ್ರೋಲ್‌ಗಳು ನಮ್ಮ ಕಾವೇರಿ ನದಿ ನೀರಿನ ಸಮಸ್ಯೆಗೆ ಸಿಗದಿರುವುದು ವಿಷಾಧವಾಗಿದೆ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ವೇದಿಕೆ ರಾಜ್ಯಧ್ಯಕ್ಷ ರಮೇಶ್‌ಗೌಡ ಅಸಮಾಧಾನ ವ್ಯಕ್ತಪಡಿಸಿದರು.
ಕಾವೇರಿ ನೀರಿನ ಹಂಚಿಕೆಯಲ್ಲಿ ಸಂಕಷ್ಟ ಸೂತ್ರ ರಚಿಸುವ ಜೊತೆಗೆ ಮೇಕೆದಾಟು ಯೋಜನೆಗೆ ಅಡಿಗಲ್ಲು ಹಾಕುವಂತೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್‌ಗೌಡರ ನೇತೃತ್ವದಲ್ಲಿ ನಿರಂತರವಾಗಿ ಹೋರಾಟ ಮಾಡುತ್ತಿದ್ದು ೬೫ನೇ ದಿನದ ಹೋರಾಟದಲ್ಲಿ ಅವರು ಮಾತನಾಡಿ, ಇಂದು ಸ್ಮಾರ್ಟ್ ಫೋನ್‌ಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮತ್ತು ರೀಲ್ಸ್‌ಗಳದ್ದೇ ಕಾರುಬಾರಾಗಿದೆ. ಕಾಲೇಜು ವಿದ್ಯಾರ್ಥಿಗಳಿಂದ ಹಿಡಿದು ಕಾರ್ಪೋರೆಟ್ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳ ವರಗೆ ಹಾಗೂ ಹಳ್ಳಿಗಾಡಿನ ಕುರಿಗಾಯಿ ಯುವಕನ ವರೆಗೆ ಈ ರೀಲ್ಸ್‌ನ ಜಾಲದಲ್ಲಿದ್ದು ಸಮಾಜದಲ್ಲಿ ಯಾವುದೇ ಘಟನೆ ನಡೆದರೂ ಆ ಘಟನೆಯ ಬಗ್ಗೆ ಟಿವಿ ಮಾಧ್ಯಮಗಳಲ್ಲಿ ೧೦ ನಿಮಿಷ ಪ್ರಚಾರ ಮಾಡಿದರೆ ಸಾಕು ಈ ಪ್ರಕರಣ ಇಡೀಗ ರಾಜ್ಯದ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿ ರೀಲ್ಸ್ ಮೂಲಕ ಹರಿದಾಡುತ್ತದೆ.
ಆದರೆ ಕಾವೇರಿ ನೀರಿನ ಸಮಸ್ಯೆ ಬಗ್ಗೆ ಮಾಧ್ಯಮಗಳು ಮೌನವಾಗಿದ್ದರೂ ತಾವೇ ಕುಡಿಯುವ ಕಾವೇರಿ ನೀರಿನ ಸಮಸ್ಯೆ ಬಗ್ಗೆ ಯಾರೂ ಸಹ ಗಮನ ನೀಡದಿರುವುದು ಬೇಸರದ ಸಂಗತಿಯಗಿದೆ. ಕಾವೇರಿ ನದಿ ನೀರಿನ ಸಮಸ್ಯೆ ಬಗ್ಗೆ ಮುಂದಿನ ಪೀಳಿಗೆಯ ಪರಿಸ್ಥಿತಿ ಏನಾಗಿರುತ್ತದೆ ಎಂಬ ಬಗ್ಗೆ ಸಣ್ಣ ಆಂದೋಲನ ಮಾಡಿದರೂ ಇದಕ್ಕೆ ಕಾವೇರಿ ಹೋರಾಟಕ್ಕೆ ದೊಡ್ಡ ಶಕ್ತಿ ಬರುತ್ತದೆ ಎಂದು ಹೇಳಿದರು.
ತಮಿಳುನಾಡಿನಲ್ಲಿ ಹೆಚ್ಚು ಮಳೆಯಾಗುತ್ತಿರುವ ನಿಟ್ಟಿನಲ್ಲಿ ಕಾವೇರಿ ನದಿ ನೀರಿನಿಂದ ತಮಿಳುನಾಡಿಗೆ ಹರಿಯುತ್ತಿರುವ ನೀರನ್ನು ಕೂಡಲೇ ನಿಲ್ಲಿಸಬೇಕು. ಜೊತೆಗೆ ಮೇಕೆದಾಟು ಯೋಜನೆಯನ್ನು ಶೀಗ್ರವೇ ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿ ಕಳೆದ ೬೫ ದಿನಗಳಿಂದ ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದು ನಮ್ಮ ಹೋರಾಟಕ್ಕೆ ಈವರೆಗೆ ಸಾವಿರಾರು ಕನ್ನಡಿಗರು, ನೂರಾರು ಸಂಘ-ಸಂಸ್ಥೆ, ಟ್ರಸ್ಟ್‌ಗಳ ಮುಖಂಡರು, ವಿದ್ಯಾರ್ಥಿಗಳು ಭಾಗವಹಿಸಿ ಬೆಂಬಲ ನೀಡಿದ್ದು, ನಮ್ಮ ಹೋರಾಟಕ್ಕೆ ಕೊನೆಯೇ ಇಲ್ಲ ಈ ಹೋರಾಟ ನಿರಂತರವಾಗಿ ನಡೆಯುತ್ತದೆ ಎಂದು ಹೇಳಿದರು.
ಸಂದರ್ಭದಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷರ ಬೇವೂರು ಯೋಗೀಶ್‌ಗೌಡ, ರಾಜ್ಯ ಉಪಾಧ್ಯಕ್ಷರುಗಳಾದ ರಂಜಿತ್ ಗೌಡ, ಬೆಂಕಿ ಶ್ರೀಧರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಕೃಷ್ಣೇಗೌಡ, ಗೌರವಾಧ್ಯಕ್ಷ ಚಿಕ್ಕಣ್ಣಪ್ಪ, ಹಾ.ಉ.ಸ.ಸಂಘದ ಅಧ್ಯಕ್ಷ ಆ. ಶಂಕರ್, ನಿ. ಶಿಕ್ಷಕ ಪುಟ್ಟಪ್ಪಾಜಿ, ಮೆಣಸಿಗನಹಳ್ಳಿ ರಾಮಕೃಷ್ಣಪ್ಪ, ಟೊಯೋಟೋ ವೆಂಕಟರಮಣ, ಆಟೋ ಸಿದ್ದಪ್ಪಾಜಿ ಚಿಕ್ಕೇನಹಳ್ಳಿ, ರಮೇಶ್ ಚಾಲಕ, ಆಟೋ ನಾಗಲಿಂಗು, ಪುಟ್ಟರಾಜು ನಾಗವಾರ, ಕಾಳೇಗೌಡ್ರು ಕೃಷ್ಣಾಪುರ, ಲಿಂಗೇಗೌಡರು, ಪವನ್ ಸೇರಿದಂತೆ ಇನ್ನೂ ಅನೇಕರು ಹಾಜರಿದ್ದರು.