ಚನ್ನಪಟ್ಟಣ: ಕನ್ನಡ ಚಿತ್ರ ರಂಗದ ಖ್ಯಾತ ಹಿರಿಯ ನಟಿ ಲೀಲಾವತಿ ಅವರ ನಿಧನಕ್ಕೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ವತಿಯಿಂದ ನಗರದ ಕಾವೇರಿ ವೃತ್ತದಲ್ಲಿ ಭಾವಪೂರ್ಣ ಶ್ರದ್ದಾಂಜಲಿಯನ್ನು ಸಲ್ಲಿಸಲಾಯಿತು.
ಕನ್ನಡ ಚಿತ್ರ ರಂಗದ ಖ್ಯಾತ ಹಿರಿಯ ನಟಿ ಲೀಲಾವತಿ ಅವರ ನಿಧನಾರ್ಥ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಎರಡು ನಿಮಿಷ ಮೌನಾಚರಣೆ ಮಾಡಿ ಅವರ ಪವಿತ್ರ ಆತ್ಮಕ್ಕೆ ಶಾಂತಿ ಕೋರಿ ಗೌರನ ನಮನವನ್ನು ಸಲ್ಲಿಸಲಾಯಿತು. ಕಕಜವೇ ರಾಜ್ಯಾಧ್ಯಕ್ಷ ರಮೇಶ್‌ಗೌಡ ಅವರು ಮಾತನಾಡಿ, ಲೀಲಾವತಿ ಅವರು ಕನ್ನಡದ ಡಾ.ರಾಜ್ ಕುಮಾರ್ ಸೇರಿದಂತೆ ಹಲವು ಭಾಷೆಗಳ ನಾಯಕರ ಜೊತೆಗೆ ನಿಟಿಸಿ, ಕನ್ನಡ ನಾಡಿನ ಹೆಸರನ್ನು ಬೆಳಗಿಸಿದವರು.ನಾಯಕಿಯಾಗಿ, ಪೋಷಕ ನಟಿಯಾಗಿ ಸುಮಾರು ೬೦೦ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿ ಪಾತ್ರಗಳಿಗೆ ಜೀವ ತುಂಬಿ ಹತ್ತು ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದರು.
ಜೊತೆಗೆ ಹಾಗೂ ಪ್ರಾಣಿ ಪಕ್ಷಿ, ಪರಿಸರ ಪ್ರೇಮಿಯಾಗಿ, ಸಮಾಜ ಸೇವಕರಾಗಿ ಸ್ವಂತ ಹಣದಿಂದ ಜನರ ಸೇವೆಗಾಗಿ ಆಸ್ಪತ್ರೆ ಹಾಗೂ ಜಾನುವಾರಗಳ ಆರೋಗ್ಯಕ್ಕೆ ಪಶು ಆಸ್ಪತ್ರೆಯನ್ನು ಕಟ್ಟಿಸಿ ಸರ್ಕಾರಕ್ಕೆ ಕೊಡುಗೆಯಾಗಿ ನೀಡಿದ ಮಹಾತಾಯಿ. ಅವರ ನಿಧನದಿಂದ ಕನ್ನಡ ಚಿತ್ರರಂಗ ಅಷ್ಟೇ ಅಲ್ಲದೇ ನಾಡು ತಬ್ಬಲಿ ಆಗಿದೆ. ಭಗವಂತ ಅವರ ಪವಿತ್ರ ಆತ್ಮಕ್ಕೆ ಚಿರಶಾಂತಿ ನೀಡಲಿ ಅವರ ನಿಧನದಿಂದ ಅವರ ಪುತ್ರ ವಿನೋದ್ ರಾಜ್ ಮತ್ತು ಕುಟುಂಬಕ್ಕೆ ಆಗಿರುವ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿದರು.
ಪತ್ರಕರ್ತ ಲಕ್ಷ್ಮೀಪತಿ ಮಂಗಳವಾರಪೇಟೆ ಮತ್ತು ಜೈಕುಮಾರ್ (ಜೆಕೆ) ಹಾಗೂ ಯುವ ಮುಖಂಡ ಗಂಗೇದೊಡ್ಡಿ ಬೋರೇಗೌಡ ಅವರು ಮಾತನಾಡಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಜನಿಸಿದ ಲೀಲಾವತಿ ಅವರು, ೬೦೦ಕ್ಕೂ ಹೆಚ್ಚು ಚಲನ ಚಿತ್ರಗಳಲ್ಲಿ ನಟಿಸಿ, ದಕ್ಷಣ ಭಾರತದ ಹೆಸರಾಂತ ಚಿತ್ರನಟಿಯಾಗಿದ್ದರು. ಜೊತೆಗೆ ಜನರ ಆರೋಗ್ಯ, ಪ್ರಾಣಿ ಪಕ್ಷಿ, ಪರಿಸರ ಬಗ್ಗೆ ವಿಶೇಷ ಕಾಳಜಿ ವಹಿಸಿ ಆಸ್ಪತ್ರೆಗಳನ್ನು ಕಟ್ಟಿಸಿ ನೇರವಾಗುವುದರ ಜೊತೆಗೆ ಸಾಮಾಜಿಕ ಸೇವಕಾರ್ಯಗಳಲ್ಲೂ ಹಾಗೂ ನಾಡು ನುಡಿ, ನೆಲ ಜಲದ ಹೋರಾಟ, ಕೃಷಿ ಚಟುವಟಿಕೆಯಲ್ಲೂ ತೊಡಗಿಸಿಕೊಂಡು ಇತರರಿಗೆ ಮಾದರಿಯಾಗಿದ್ದರು. ಅವರ ಸೇವೆ ಅವಿಸ್ಮರಣೀಯ. ಅವರ ನಿಧನದಿಂದ ಅನರ್ಘ್ಯ ರತ್ನವನ್ನು ಕಳೆದುಕೊಂಡಂತೆ ಆಗಿದೆ.ಅವರು ಮತ್ತೊಮ್ಮೆ ಈ ನಾಡಿನಲ್ಲಿ ಹುಟ್ಟಿಬರಲಿ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರ ಪುತ್ರ ವಿನೋದ್‌ರಾಜ್ ಮತ್ತು ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಪರಮಾತ್ಮ ನೀಡಲಿ ಎಂದು ಪ್ರಾರ್ಥಿಸಿದರು. ಸಭೆಯಲ್ಲಿ ಕಕಜವೇ ಪದಾಧಿಕಾರಿಗಳಾದ ರಂಜಿತ್, ಕೃಷ್ಣೇಗೌಡ, ರ್‍ಯಾಂಬೋ ಸುರೇಶ್, ಪುನೀತ್, ದುರ್ಗೇಗೌಡ, ಸೇರಿದಂತೆ ಕಾರ್ಯಕರ್ತರು ಸಾರ್ವಜನಿಕರು ಭಾಗವಹಿಸಿದ್ದರು.