Monday, April 21, 2025
Google search engine

Homeಅಪರಾಧಮಾಜಿ ಯೋಧನಿಗೆ ಮದುವೆ ಆಸೆ ತೋರಿಸಿ ವಂಚಿಸಿದ್ದ ಮೂವರ ಬಂಧನ

ಮಾಜಿ ಯೋಧನಿಗೆ ಮದುವೆ ಆಸೆ ತೋರಿಸಿ ವಂಚಿಸಿದ್ದ ಮೂವರ ಬಂಧನ

ಮಡಿಕೇರಿ: ಕೇರಳದ ಮಾಜಿ ಯೋಧರೊಬ್ಬರಿಗೆ ಮದುವೆ ಮಾಡಿಸುವುದಾಗಿ ನಂಬಿಸಿ 8 ಲಕ್ಷ ರೂಪಾಯಿ ನಗದು ಹಾಗು 2,00,000 ರೂ. ಚೆಕ್ ಪಡೆದು ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಕೊಡಗು ಪೊಲೀಸ್ ತಂಡ ಬಂಧಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳದ ನಿವಾಸಿ ಅಬ್ದುಲ್ ಬಶೀರ್ (29) ಕಡಬದ ನಿವಾಸಿ ಸಾಧಿಕ್(30) ಮತ್ತೊಬ್ಬ ಆರೋಪಿ ಫೈಸುಲ್, ಈಗಾಗಲೇ ಬೇರೊಂದು ಪ್ರಕರಣದಲ್ಲಿ ಮೈಸೂರಿನಲ್ಲಿ ಬಂಧನವಾಗಿದ್ದಾರೆ.

ಬಂಧಿತ ಆರೋಪಿಗಳಿಂದ ಮೊಬೈಲ್, ನಗದು ಹಾಗೂ ಚೆಕ್ ​ನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೋರ್ವ ಆರೋಪಿ ಅಮೀರ್ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.

ಕೇರಳದ ಎರ್ನಾಕುಳಂ ಜಿಲ್ಲೆಯ ನಿವಾಸಿ, 64 ವಯಸ್ಸಿನ ಮಾಜಿ ಯೋಧನಿಗೆ ಮದುವೆಯಾಗಲು ಒಬ್ಬ ಒಳ್ಳೆಯ ಹುಡುಗಿ ಇದ್ದಾಳೆ ಎಂದು ನಂಬಿಸಿ, ಅವರನ್ನು ನವೆಂಬರ್ 26ರಂದು ಮಡಿಕೇರಿಯ ಹೋಂ ಸ್ಟೇವೊಂದಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಮಹಿಳೆ ಒಬ್ಬಳನ್ನು ತೋರಿಸಿ, ಇವರನ್ನು ವಿವಾಹವಾಗುವಂತೆ ಹೇಳಿ, ಅದೇ ಹೋಂ ಸ್ಟೇನಲ್ಲಿ ಆರೋಪಿಗಳು ಮದುವೆ ಮಾಡಿಸಿದ್ದಾರೆ. ನಂತರ ಇಬ್ಬರನ್ನು ಹೋಂ ಸ್ಟೇಯಲ್ಲಿ ಅಂದು ತಂಗಲು ಅವಕಾಶ ನೀಡಿದ್ದರು.

ನಂತರ ಸಂಜೆ ಆರೋಪಿಗಳು ಇವರಿಬ್ಬರ ಜೊತೆಯಲ್ಲಿರುವ ಮದುವೆಯ ಫೋಟೋವನ್ನು ಮಾಜಿ ಯೋಧನಿಗೆ ತೋರಿಸಿ ಬ್ಲಾಕ್ ಮೇಲ್ ಮಾಡಿ, ಒಟ್ಟು ಎಂಟು ಲಕ್ಷ ನಗದು ಹಾಗೂ 2 ಲಕ್ಷ ರೂಪಾಯಿ ಚೆಕ್ ​ನ್ನು ಪಡೆದು ಆರೋಪಿಗಳು ಪರಾರಿಯಾಗಿದ್ದರು.

ನಂತರ ಸಂತ್ರಸ್ತ ಮಡಿಕೇರಿ ಪೊಲೀಸರಿಗೆ ದೂರನ್ನು ನೀಡಿದ್ದರು. ಇದರ ಅನ್ವಯ ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಪತ್ತೆ ಹಚ್ಚಿ, ಅವರಿಂದ ನಗದು, ಮೂರು ಮೊಬೈಲ್ ಹಾಗೂ ಚೆಕ್ ​ನ್ನು ವಶಪಡಿಸಿಕೊಂಡಿದ್ದಾರೆ.

RELATED ARTICLES
- Advertisment -
Google search engine

Most Popular