ಎಡತೊರೆ ಮಹೇಶ್
ಎಚ್.ಡಿ.ಕೋಟೆ: ಎಚ್ ಡಿ ಕೋಟೆ ಆಡಳಿತ ಸೌಧದ ಎದುರು ಜೀತದಾಳು ನಿರ್ಮಲಗೆ ಬಿಡುಗಡೆ ಪತ್ರ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟ ಮತ್ತು ದಲಿತಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ಕುರಿತು ಮಾತಾನಾಡಿದ ಜೀವಿಕ ರಾಜ್ಯ ಸಂಘಟನಾ ಸಂಚಾಲಕ ಉಮೇಶ್. ಬಿ.ನೂರಲಕುಪ್ಪೆ ಕಳೆದ ಐದು ದಿನಗಳ ಹಿಂದೆ ಭೂಮಾಲೀಕ ಈರೇಗೌಡನ ತೋಟದಲ್ಲಿ ಒತ್ತೆಯಾಳಾಗಿ ದುಡಿಯುತ್ತಿದ್ದ ನೇಪಾಳಿ ಮೂಲದ ನಿರ್ಮಲ ಮತ್ತು ಎರಡು ಮಕ್ಕಳನ್ನ ತಾಲೋಕು ಆಡಳಿತ ವತಿಯಿಂದ ರಕ್ಷಣೆ ಮಾಡಿ ಸಾಂತ್ವನ ಕೇಂದ್ರದಲ್ಲಿ ಇಡಲಾಗಿದೆ. ಆದರೆ ಆಕೆಗೆ ಮತ್ತು ಕುಟುಂಬಕ್ಕೆ ಇನ್ನೂ ಕೂಡ ಜೀತಮುಕ್ತಿ ಪತ್ರ ನೀಡಲು ಹಿಂದುಮುಂದು ನೋಡುತ್ತಿರುವುದು ಖಂಡನೀಯ. ಈ ಪ್ರಕರಣದಲ್ಲಿ ಯಾರದೋ ಒತ್ತಡಕ್ಕೆ ಮಣಿದು ಮಾಲೀಕ ಈರೇಗೌಡನನ್ನು ರಕ್ಷಿಸುವಂತೆ ಕಾಣುತ್ತಿದೆ. ಅನಧಿಕೃತವಾಗಿ ಹೊರದೇಶದ ಮಹಿಳೆ ಮತ್ತು ಮಕ್ಕಳನ್ನು ಒತ್ತೆಯಾಳಾಗಿ ದುಡಿಸಿಕೊಳ್ಳುತ್ತಿದ್ದ ಮಾಲೀಕನಿಗೆ ಯಾಕೆ ಕ್ರಮ ಆಗುತ್ತಿಲ್ಲ. ಒಂದುವರೆ ವರ್ಷದಿಂದ ಯಾವ ಅಧಿಕಾರಿಗಳ ಗಮನಕ್ಕೂ ಬರಲಿಲ್ಲವೆ…? ಅಥವಾ ಬಂದರು ಕಣ್ಣುಮುಚ್ಚಿ ಕುಳಿತ್ತಿದ್ದರೆ. ಎಸಿ ರವರ ಪ್ರಕಾರ ಪೌರತ್ವ ಸಮಸ್ಯೆ ಎದುರಾದರೇ ರಕ್ಷಣೆ ಹೊಂದಿದ ಮಹಿಳೆಯ ಮುಂದಿನ ಭವಿಷ್ಯ ಏನು ಎಂದು ತಹಶಿಲ್ದಾರ ರವರಿಗೆ ಪ್ರಶ್ನೆಮಾಡಿದರು.

ಬಳಿಕ ಜೀವಿಕ ಬಸವರಾಜ್ ಮಾತಾನಾಡಿ, ಎಸಿ ರವರು ಬಿಡುಗಡೆ ಪತ್ರ ನೀಡಲು ವಿಳಂಬ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ. ಇದು ಮಾನವ ಕಳ್ಳ ಸಾಗಾಣಿಕೆ ಮತ್ತು ಜೀತ ಪದ್ಧತಿಯ ಕಾಯ್ದೆ ಅಡಿಯಲ್ಲಿ ಬರುತ್ತಿದೆ. ಅದ್ದರಿಂದ ಈ ಕೂಡಲೇ ಮಾಲೀಕನ ಮೇಲೆ ಕ್ರಮ ಜರುಗಿಸಬೇಕು ಹೊರದೇಶದ ಮಹಿಳೆ ಮತ್ತು ಮಕ್ಕಳನ್ನ ಅನಧಿಕೃತವಾಗಿ ಕೆಲಸಕ್ಕೆ ಇಟ್ಟುಕೊಂಡ ಆಧಾರದಲ್ಲಿ ಮಾಲೀಕನ ಮೇಲೆ ಕ್ರಮ ಜರುಗಿಸಿ ನೊಂದ ಮಹಿಳೆಗೆ ನ್ಯಾಯ ಕೊಡಿಸಬೇಕೆಂದು ವಿಳಂಬವಾದರೆ ಮುಂದಿನ ಒಂದು ವಾರದಲ್ಲಿ ಬೃಹತ್ ಹೋರಾಟ ಮಾಡಬೇಕಾಗುತ್ತದೆ ಎಂದರು
ಇದೇ ಸಂದರ್ಭದಲ್ಲಿ ಪ್ರತಿಭಟನೆ ಕುರಿತು ಕಾರ್ಮಿಕ ಮುಖಂಡ ಅಕ್ಬರ್ ಪಾಷ. ದಸಂಸ ಮುಖಂಡರಾದ ದೇವರಾಜ್ ಆನಗಟ್ಟಿ. ಸಣ್ಣಕುಮಾರ್. ಕುಮಾರ್. ಮಹಿಳಾ ಮುಖಂಡರಾದ ಅನುಷಾ. ಶೈಲಾ ಸುಧಾಮಣಿ. ಮುಂತಾದವರು ಮಾತಾನಾಡಿದರು.
ಪ್ರತಿಭಟನೆಯಲ್ಲಿ ಶಿವಣ್ಣ. ಜಯಮ್ಮ. ಗಣೇಶ. ಚಂದ್ರಶೇಖರ ಮೂರ್ತಿ. ಶಿವರಾಜ್. ವೆಂಕಟೇಶ. ನಟರಾಜ್. ಶ್ರೀನಿವಾಸ. ಮಲ್ಲಿಗಮ್ಮ. ನಾಗಮ್ಮ. ಚಾ. ನಂಜುಂಡ ಮೂರ್ತಿ. ಮುದ್ದುಮಲ್ಲಯ್ಯ. ಕುಮಾರ್. ಮುಂತಾದ ಮುಖಂಡರು ಭಾಗವಹಿಸಿದ್ದರು.