ಮಂಡ್ಯ: ಮನುಸ್ಮೃತಿ ಪ್ರಕಾರ ಶೂದ್ರರು ಎಂದರೆ ಸೂ ಮಕ್ಕಳು ಎಂದು ಪ್ರೊ ಭಗವಾನ್ ಮತ್ತೆ ನಾಲಿಗೆ ಹರಿಯ ಬಿಟ್ಟಿದ್ದಾರೆ.
ಮಂಡ್ಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದಲ್ಲಿ ಬ್ರಾಹ್ಮಣರನ್ನ ಹೊರತು ಪಡಿಸಿ ಉಳಿದವರೆಲ್ಲರೂ ಈ ವರ್ಗಕ್ಕೆ ಸೇರುತ್ತಾರೆ. ಮನುಸ್ಕೃತಿ ಸಮಾಜದಲ್ಲಿ ನಾಲ್ಕು ವರ್ಗಗಳನ್ನ ಗುರ್ತಿಸಿತ್ತು. ಯಾರೆಲ್ಲ ಜನಿವಾರ ಹಾಕೊಳ್ಳುವುದಿಲ್ಲವೋ ಅವರೆಲ್ಲರೂ ಶೂದ್ರರೇ ಎಂದಿದ್ದಾರೆ.
ಬ್ರಾಹ್ಮಣರ ಹೆಂಗಸರು ಜನಿವಾರ ಹಾಕೋದಿಲ್ಲ ಹೀಗಾಗಿ ಅವರೂ ಶೂದ್ರರೇ. ಇದನ್ನ ಹೇಳಲು ಹೋದ್ರೆ ನನ್ನ ಕೊಂದೇ ಹಾಕ್ತಾರೆ. ಆರ್ ಎಸ್ ಎಸ್ ಎಂದ್ರೆ ರಾಷ್ಟ್ರೀಯ ಸುಳ್ಳುಗಾರರ ಸಂಘ. ಅದರಂತೆ ಡಿಎಸ್ ಎಸ್ ಯುವ ಜನರನ್ನ ತಯಾರು ಮಾಡಿ ಸಮಾಜಕ್ಕೆ ಸತ್ಯ ತಿಳಿಸಬೇಕು ಎಂದು ಭಗವಾನ್ ತಿಳಿಸಿದ್ದಾರೆ.