Monday, April 21, 2025
Google search engine

Homeರಾಜ್ಯದೇಹದ ಮುಕ್ಕಾಲು ಭಾಗ ತಿಂದು ಹಾಕಿದ ಹುಲಿ: ಆತಂಕದಲ್ಲಿ ಗ್ರಾಮಸ್ಥರು

ದೇಹದ ಮುಕ್ಕಾಲು ಭಾಗ ತಿಂದು ಹಾಕಿದ ಹುಲಿ: ಆತಂಕದಲ್ಲಿ ಗ್ರಾಮಸ್ಥರು

ಗುಂಡ್ಲುಪೇಟೆ(ಚಾಮರಾಜನಗರ): ಹುಲಿ ದಾಳಿಗೆ‌ ಸಿಲುಕಿದ ವ್ಯಕ್ತಿಯೋರ್ವನ ಮೃತ ದೇಹ ಪತ್ತೆಯಾಗಿರುವ ದುರ್ಘಟನೆ ತಾಲೂಕಿನ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಆಡಿನ ಕಣಿವೆ ಸಮೀಪದಲ್ಲಿ ಮಂಗಳವಾರ ನಡೆದಿದೆ.

ಆಡಿನಕಣಿವೆಯ ಬಸವಯ್ಯ(54) ಮೃತ ವ್ಯಕ್ತಿ.

ಈತ ಬುಡಕಟ್ಟು ಜನಾಂಗದವನಾಗಿದ್ದು, ಕಳೆದ ಎರಡು ದಿನಗಳ ಹಿಂದೆ ಕುರಿಗಳನ್ನು ಮೇಯಿಸಲು ಕಾಡಿಗೆ ತೆರಳಿದ್ದ. ನಂತರ ಮನೆಗೆ ವಾಪಾಸ್ಸಾಗದ ಹಿನ್ನೆಲೆ ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಅಭಯಾರಣ್ಯದ ಒಳಗೆ ಮೃತದೇಹ ಪತ್ತೆಯಾಗಿದೆ. ಆತನ ಕಾಲು, ಎದೆಯ‌ ಭಾಗವನ್ನು ಹುಲಿ ತಿಂದು ಹಾಕಿದ್ದು, ಕೇವಲ ಹೊಟ್ಟೆ ಭಾಗವನ್ನು ಮಾತ್ರ ಬಿಟ್ಟಿದೆ. ಮುಕ್ಕಾಲು ಭಾಗ ತಿಂದು ಬಿಟ್ಟ ಮೃತದೇಹ ಕಂಡ ಕುಟುಂಬಸ್ಥರು ‌ಹಾಗೂ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.

ಘಟನೆ ಕುರಿತು ಕುಟುಂಬಸ್ಥರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ ಬಳಿಕ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES
- Advertisment -
Google search engine

Most Popular