ಮೈಸೂರು: ಮಾತೋಮ್ ಎಜುಕೇಶನ್ ಸೊಸೈಟಿ (ರಿ), ಸೇಂಟ್ ಥಾಮಸ್ ವಿದ್ಯಾ ಸಂಸ್ಥೆಗಳು, ವಿಶ್ವೇಶ್ವರ ನಗರ ಮೈಸೂರು ಸಂಸ್ಥೆಯ ವತಿಯಿಂದ ಇಂದು ಸಂಜೆ 4:00ಗೆ ಮೈಸೂರಿನ ಕಲಾಮಂದಿರದಲ್ಲಿ ಶಾಲೆಯ 59ನೇ ವಾರ್ಷಿಕೋತ್ಸವ ‘ವಸಂತೋತ್ಸವ’ವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಸ್ಥರಾದ ರೈವರಂಡ್ ಶೈಜು ಪಿ. ಜಾನ್ ವಹಿಸಿದ್ದು ಸಭೆಗೆ ಹಾಜರಾಗಿದ್ದ ಗಣ್ಯರನ್ನು ಹಾಗೂ ಪೋಷಕರನ್ನು ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಯುತ ಮುತ್ತುರಾಜ್. ಎಂ ಐಪಿಎಸ್ ವಿಶೇಷ ಕಾರ್ಯನಿರ್ವಾಹಕ ಅಧಿಕಾರಿ ಕಾನೂನು ಹಾಗೂ ಸುವ್ಯವಸ್ಥೆ, ಮೈಸೂರು ಇವರು ವಿದ್ಯಾರ್ಥಿಗಳಿಗೆ ಹಿತವಚನ ನೀಡುವುದರ ಮೂಲಕ ಕಾನೂನು ಅರಿವು ಮೂಡಿಸಿದರು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಮತ್ತೊರ್ವ ಗಣ್ಯರಾದ ಶ್ರೀಯುತ ಎಚ್.ಕೆ ಪಾಂಡು ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ, ಮೈಸೂರು ಜಿಲ್ಲೆ, ಮೈಸೂರು ಇವರು ಮಕ್ಕಳಿಗೆ ಶಿಕ್ಷಣದ ಮಹತ್ವವನ್ನು ತಿಳಿಸುವ ಮೂಲಕ ಶುಭ ಹಾರೈಸಿದರು.
ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಯುತ ಸಾಮ್ ಚೆರಿಯನ್ ಕುಂಬು ಕಟ್ಟು ಸ್ಪೂರ್ತಿದಾಯಕ ಮಾತುಗಳನ್ನಾಡಿದರು ಮತ್ತು ಸಂಸ್ಥೆಯ ಖಜಾಂಚಿಯಾದ ಶ್ರೀಮತಿ ಶೋಭನ ಥಾಮಸ್ ಶ್ರೀಮತಿ ಗ್ರೇಸಿ ಥಾಮಸ್ ಮಾರ್ತೋಮ ಸೆರಿಯನ್ ಚರ್ಚ್ ಮೈಸೂರು ಇವರೆಲ್ಲರ ಸಮ್ಮುಖದಲ್ಲಿ ಶಾಲೆಯ ವಾರ್ಷಿಕ ವಾರ್ಷಿಕ ಸಂಚಿಕೆ Streams-2023 ಅನ್ನು ಬಿಡುಗಡೆ ಮಾಡಲಾಯಿತು. 2022- 23ನೇ ಸಾಲಿನಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಎಂಡೋಮೆಂಟ್ ಬಹುಮಾನಗಳನ್ನು ವಿತರಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬರುವುದರ ಮೂಲಕ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.
