ಪಾಂಡವಪುರ: ತಾಲ್ಲೂಕಿನ ಮೇಲುಕೋಟೆ ಸಮೀಪದ ದಳವಾಯಿ ಕೆರೆಯಲ್ಲಿ ನವಜಾತ ಹೆಣ್ಣು ಶಿಶುವಿನ ಶವ ಪತ್ತೆಯಾಗಿದೆ.
ಎರಡು ದಿನಗಳ ಕೆಳಗೆ ಹೆಣ್ಣು ಶಿಶು ಜನಿಸಿದೆ ಎನ್ನಲಾಗಿದ್ದು, ಕ್ರೂರಿಗಳು ಕವರ್ ನಲ್ಲಿ ಸುತ್ತಿ ಕೆರೆಯ ಸಮೀಪ ಬಿಸಾಡಿ ಹೋಗಿದ್ದಾರೆ.
ಹೆಣ್ಣು ಎಂಬ ಕಾರಣಕ್ಕೆ ಶಿಶುವನ್ನ ಸಾಯಿಸಿ ದಳವಾಯಿ ಕೆರೆಗೆ ಹೆಣ್ಣು ಶಿಶುವನ್ನು ಬಿಸಾಡಿ ಹೋಗಿದ್ದಾರೆ.
ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪಾಂಡವಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.