Sunday, April 20, 2025
Google search engine

Homeಸ್ಥಳೀಯರಾಷ್ಟ್ರ ಜಾಗೃತಿ ಅಭಿಯಾನದ ಸಮಾರೋಪ ಸಮಾರಂಭದ ಪೂರ್ವಭಾವಿ ಸಭೆ

ರಾಷ್ಟ್ರ ಜಾಗೃತಿ ಅಭಿಯಾನದ ಸಮಾರೋಪ ಸಮಾರಂಭದ ಪೂರ್ವಭಾವಿ ಸಭೆ

ಮೈಸೂರು: ಶೋಭಕೃತ್ ಸಂವತ್ಸರ ಮಾರ್ಗಶಿರ ಮಾಸದ ಪಾಡ್ಯದ(ಮಂಗಳವಾರ ) ಸಂಧ್ಯಾ ಸಮಯದಲ್ಲಿ ಮೈಸೂರಿನ ಶ್ರೀರಾಂಪುರದ ಮೂಕಾಂಬಿಕಾ ಸಮೃದ್ದಿ ಬಡಾವಣೆಯಲ್ಲಿ ರಾಷ್ಟ್ರ ಜಾಗೃತಿ ಅಭಿಯಾನದ ಸಮಾರೋಪ ಸಮಾರಂಭದ ಪೂರ್ವಭಾವಿ ಸಭೆ ಹಾಗೂ 2023-24 ನೇ ಸಾಲಿನ ಕಾರ್ಯಕ್ರಮ ಹಾಗೂ ಸ್ಪರ್ಧೆಗಳ ಪರಿಚಯ ಸಭೆ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರ ಜಾಗೃತಿ ಅಭಿಯಾನದ ಮೈಸೂರು ಜಿಲ್ಲಾಧ್ಯಕ್ಷರಾದ ಜಿ.ಆರ್. ನಾಗರಾಜ್ ರವರು ವಹಿಸಿದ್ದರು, ರಾಷ್ಟ್ರ ಜಾಗೃತಿ ಅಭಿಯಾನದ ಸಂಚಾಲಕರಾದ ರವಿ ಹೊಯ್ಸಳ, ಆದರ್ಶ ಸೇವಾ ಸಂಘದ ಕಾರ್ಯದರ್ಶಿ ರಾಮಕೃಷ್ಣ ಹಾಗೂ ಮೂಕಾಂಬಿಕಾ ಸಮೃದ್ದಿ ಬಡಾವಣೆ ನಿವಾಸಿಗಳ ಹಿತರಕ್ಷಣ ಸಮಿತಿ ಅಧ್ಯಕ್ಷರಾದ ಕೆ.ಆರ್. ಗಣೇಶ್ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಸಭೆಯನ್ನು 2 ವರ್ಷದ ಪುಟಾಣಿ ಮಕ್ಕಳಾದ ಶ್ರೀನಿಧಿ ತೇಜಸ್ ಹಾಗೂ ಕರಣ್ ಕೀರ್ತಿ ಶ್ಲೋಕ ಹೇಳುವ ಮೂಲಕ ಚಾಲನೆ ನೀಡಿದರು.

ಪೃಥು ಪಿ ಅದ್ವೈತ್, ವೆಂಕಟ ರಾಘವ ಹಾಗೂ ಹರಣ್ ಪಿ ಜೈನ್ ಭಗವದ್ಗೀತೆ ಪಠಣ ಮಾಡಿ ಪ್ರಾರ್ಥನೆ ಮಾಡಿದರು.‌ ಭಾರತ ಮಾತೆಗೆ ಪುಷ್ಪಾರ್ಚನೆ, ಸಂಜನಾ ಸಹೋದರಿಯರಿಂದ ದೇಶಭಕ್ತಿ ಗೀತೆ, ಶ್ರೀಮತಿ ಶುಭಾ ಅರುಣ್ ರವರು ಗೀತಾ ಗಾಯನ, ಕುಮಾರಿ ವರ್ಷ ರಮೇಶ್ ಭರತನಾಟ್ಯ ಪ್ರದರ್ಶನ ಹಾಗೂ ಕೃಷ್ಣ ಯಶ್ವಂತ್ ಕೊಳಲು ವಾದನ ಮಾಡಿದರು.

ರಾಷ್ಟ್ರ ಜಾಗೃತಿ ಅಭಿಯಾನದ ಸಂಚಾಲಕರಾದ ರವಿ ಹೊಯ್ಸಳ ರವರು ಮಾತನಾ,  ಭಾರತವು ಬಹಳ ವಿಶೇಷವಾದ ರಾಷ್ಟ್ರ. ಅದರ ಅಭಿಮಾನ ನಮ್ಮಲ್ಲಿ ಇರಬೇಕು ರಾಷ್ಟ್ರ ಜಾಗೃತಿ ಅಭಿಯಾನ ಸಂಘಟನೆಯು ವಿಶ್ವಾದ್ಯಂತ ಇಂದು ಹರಡಿ 4 ಕೋಟಿ 84 ಲಕ್ಷ ಸದಸ್ಯರನ್ನು ಹೊಂದಿದೆ. ಭಾರತೀಯ ದೇಶಭಕ್ತಿ ಗೀತೆ, ಭಜನೆ, ನೃತ್ಯ , ಸಂಸ್ಕಾರ, ಸಂಸ್ಕೃತಿ ವಿಚಾರಗಳನ್ನು ಪ್ರಪಂಚದಾದ್ಯಂತ ಹಾಡು, ನೃತ್ಯ, ಸಂವಾದ ಹಾಗೂ ಸಮರ್ಪಣೆ ಮಾಡುವ ದೇಶಭಕ್ತಿಯ ಜಾಗೃತಿ ಹಾಗೂ ಭಾರತೀಯತೆಯನ್ನು ಗಟ್ಟಿ ಗೊಳಿಸುವ ಪ್ರಯತ್ನ ನಿರಂತರವಾಗಿ ಎರಡು ದಶಕಗಳಿಂದ ಮಾಡುತ್ತಿದೆ ಎಂದರು.

ದೇಶಭಕ್ತಿ ಗೀತೆ, ಭಜನೆ, ವಚನ, ವೇದ ಹೀಗೆ ವಿವಿಧ ವಿಭಾಗಗಳಲ್ಲಿ ಜನರು ಭಾಗವಹಿಸಬಹುದು. ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಜನ 2022-23 ನೇ ಸಾಲಿನಲ್ಲಿ ಭಾಗವಹಿಸಿದ್ದರು. ಅದರಲ್ಲಿ ವಿಜೇತರಿಗೆ ಮೈಸೂರಿನ ಕಲಾಮಂದಿರದಲ್ಲಿ 2022-23 ರ ಸಮಾರೋಪ ಸಮಾರಂಭ ಮಾಡಿ ಬಹುಮಾನ ವಿತರಣೆ ಮಾಡಲಾಗುವುದು. 2023-24 ನೇ ಸಾಲಿನ ಸ್ಪರ್ಧೆಗಳಿಗೆ ಮೂಕಾಂಬಿಕಾ ಸಮೃದ್ದಿ ಬಡಾವಣೆಯ ನಿವಾಸಿಗಳಿಗೆ ಆಹ್ವಾನ ನೀಡಿದರು.

ರಾಷ್ಟ್ರ ಜಾಗೃತಿ ಅಭಿಯಾನದ ಮೈಸೂರು ಜಿಲ್ಲಾಧ್ಯಕ್ಷರಾದ ಜಿ.ಆರ್. ನಾಗರಾಜ್ ರವರು ಮಾತನಾಡಿ, ಮನೆಗಳಲ್ಲಿ ಪೋಷಕರು ಸಂಸ್ಕಾರಯುಕ್ತವಾಗಿರಬೇಕು, ಪೋಷಕರನ್ನು ಮಕ್ಕಳು ಅನುಸರಿಸುತ್ತಾರೆ, ಮಕ್ಕಳಿಗೆ ಪ್ರತಿ ಮನೆಯಲ್ಲಿ ಭಾರತೀಯ ಸಂಸ್ಕೃತಿ ಆಚಾರ ವಿಚಾರಗಳನ್ನು ಪದ್ದತಿ ಪೂಜೆ ಪುನಸ್ಕಾರಗಳನ್ನು ಕಲಿಸಬೇಕು. ದೇಶದ ಪ್ರತಿಯೊಬ್ಬರು ರಾಷ್ಟ್ರಗೀತೆ, ನಾಡಗೀತೆ ಗಳನ್ನು ಕಲಿಯಬೇಕು. ನಮ್ಮ ಮಕ್ಕಳನ್ನು ಸಂಸ್ಕಾರ ವಂತರನ್ನಾಗಿ ಮಾಡುವುದು, ದೇಶದ ಉತ್ತಮ ಪ್ರಜೆಗಳಾಗಿ ಮಾಡುವುದು ಹಾಗೂ ಸುರಕ್ಷಿತ ಭಾರತವನ್ನು ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ತಿಳಿಸಿದರು.

ರಾಮಕೃಷ್ಣ ರವರು ಡಿಸೆಂಬರ್ 20 ಹಾಗೂ 21 ರಂದು ಕಲಾಮಂದಿರದಲ್ಲಿ ನೆಡೆಯುವ ಕಾರ್ಯಕ್ರಮದ ವಿವರ ನೀಡಿದರು.

ಮೂಕಾಂಬಿಕಾ ಸಮೃದ್ದಿ ಬಡಾವಣೆಯ ನಿವಾಸಿಗಳ ಹಿತರಕ್ಷಣ ಸಮಿತಿ ಅಧ್ಯಕ್ಷರಾದ ಕೆ.ಆರ್ ಗಣೇಶ್ ಮಾತನಾಡಿ, ನಮ್ಮ ಬಡಾವಣೆಯನ್ನು ನಾವು ಸ್ವಚ್ಛ ಬಡಾವಣೆಯಾಗಿ ಹಾಗೂ ಸಾಂಸ್ಕೃತಿಕ ಬಡಾವಣೆಯಾಗಿ ಮಾಡಲು ಶ್ರಮ ಪಡುತ್ತಿದ್ದೇವೆ. ರಾಷ್ಟ್ರ ಮಟ್ಟದ ರಾಷ್ಟ್ರ ಜಾಗೃತಿ ಅಭಿಯಾನ ಸಮಿತಿಯು ನಮ್ಮನ್ನು ಗುರುತಿಸಿದ್ದು, ಜಿ.ಆರ್. ನಾಗರಾಜ್ ರವರ ದೊಡ್ಡ ಗುಣದ ಉದಾಹರಣೆಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ಮೂಕಾಂಬಿಕಾ ಸಮೃದ್ದಿ ಬಡಾವಣೆ ನಿವಾಸಿಗಳ ಹಿತರಕ್ಷಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಪುನೀತ್ ಜಿ ಮಾಡಿದರು.

ಕಾರ್ಯಕ್ರಮದಲ್ಲಿ ಆದರ್ಶ ಸೇವಾ ಸಂಘದ ಸದಸ್ಯರು, ಮೂಕಾಂಬಿಕಾ ಸಮೃದ್ದಿ ಬಡಾವಣೆ ನಿವಾಸಿಗಳ ಹಿತರಕ್ಷಣ ಸಮಿತಿಯ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು, ಮೂಕಾಂಬಿಕಾ ಸಮೃದ್ದಿ ಬಡಾವಣೆಯ ನಿವಾಸಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular