Saturday, April 19, 2025
Google search engine

Homeಅಪರಾಧಅಕ್ರಮವಾಗಿ ಗಂಧದ ಮರದ ತುಂಡುಗಳ ಸಾಗಣೆ:ಮೂವರ ಬಂಧನ

ಅಕ್ರಮವಾಗಿ ಗಂಧದ ಮರದ ತುಂಡುಗಳ ಸಾಗಣೆ:ಮೂವರ ಬಂಧನ

ಮೈಸೂರು:ಅರಣ್ಯ ಸಂಚಾರಿ ದಳ ಮೈಸೂರು ವಿಭಾಗದ ತಂಡ ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಗಂಧದ ಮರದ ತುಂಡುಗಳನ್ನ ಅಕ್ರಮವಾಗಿ ಸಾಗಿಸುತ್ತಿದ್ದ ಮೂವರು ಆರೋಪಿಗಳ ಬಂಧನವಾಗಿದೆ.ಶಿವಮೊಗ್ಗ ಮೂಲದ ರಾಘವೇಂದ್ರ ಗುಡಿಗಾರ್,ಸಚಿನ್ ಎಂ ಗುಡಿಗಾರ್ ಹಾಗೂ ನಾರಾಯಣ್ ಬಂಧಿತ ಆರೋಪಿಗಳು. ಶಿರಸಿಯಿಂದ ಮೈಸೂರಿನ ಮಂಡಿಮೊಹಲ್ಲಾ ಗೆ ತರಲಾಗುತ್ತಿದ್ದ 308 ಕೆ.ಜಿ.ತೂಕದ ಗಂಧದ ತುಂಡುಗಳನ್ನ ವಶಪಡಿಸಿಕೊಳ್ಳಲಾಗಿದೆ.ಗಂಧದ ಮರದ ತುಂಡುಗಳನ್ನ ಸಾಗಿಸಲು ಬಳಸಿದ್ದ ಕಾರನ್ನೂ ಸಹ ಅರಣ್ಯ ಸಂಚಾರಿ ದಳದ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅರಣ್ಯ ಇಲಾಖೆ ಸಿಐಡಿ ಸುಧೀರ್ ಕುಮಾರ್ ರೆಡ್ಡಿ ಹಾಗೂ ಮಡಿಕೇರಿ ಅರಣ್ಯ ಇಲಾಖೆ ಸಿಐಡಿ ವಿಭಾಗದ ಎಸ್ಪಿ ಎಸ್.ಎಸ್.ಕಾಶಿ ಮಾರ್ಗದರ್ಶನದಲ್ಲಿ ಮೈಸೂರು ಅರಣ್ಯ ಸಂಚಾರ ದಳದ ಪಿಎಸ್ಸೈ ಲಕ್ಷ್ಮಿ,ಕೊಳ್ಳೇಗಾಲ ಅರಣ್ಯ ಸಂಚಾರಿ ದಳದ ಪಿಎಸ್ಸೈ ವಿಜಯರಾಜು,ಸಾಗರ ಅರಣ್ಯ ಸಂಚಾರಿ ದಳದ ಪಿಎಸ್ಸೈ ವಿನಾಯಕ ಹಾಗೂ ಸಕಲೇಶಪುರ ಅರಣ್ಯ ಸಂಚಾರಿ ದಳದ ಪಿಎಸ್ಸೈ ಸ್ವಾಮಿ ಮತ್ತು ಸಿಬ್ಬಂದಿಗಳಾದ ಜುಹೂರ್ ಅಹಮದ್,ಹೇಮರಾಜು,ಕೃಷ್ಣೇಗೌಡ,ಅರುಣ್ ರವರು ಭಾಗವಹಿಸಿ ಕಾರ್ಯಾಚರಣೆಯನ್ನ ಯಶಸ್ವಿಗೊಳಿಸಿದ್ದಾರೆ.

RELATED ARTICLES
- Advertisment -
Google search engine

Most Popular