ಮಂಡ್ಯ: ಹೆಣ್ಣು ಭ್ರೂಣ ಪತ್ತೆ- ಹತ್ಯೆ ಬಗ್ಗೆ ಪರಿಶೀಲನೆ ಮಾಡುವ ಸಲುವಾಗಿ ಜಿಲ್ಲಾಧಿಕಾರಿಗಳು ಮೂರು ತಂಡ ರಚನೆ ಮಾಡಿದ್ದಾರೆ ಎಂದು ಮಂಡ್ಯ ಡಿಎಚ್ ಓ ಡಾ.ಮೋಹನ್ ತಿಳಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಮಟ್ಟ, ತಾಲ್ಲೂಕು ಮಟ್ಟ, ಗ್ರಾ.ಪಂ.ಹಾಗೂ ಗ್ರಾಮ ಮಟ್ಟದಲ್ಲಿ ಪರಿಶೀಲನೆ ಮಾಡಿ ತಹಶೀಲ್ದಾರ್ ಗೆ ವರದಿ ನೀಡಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಗ್ರಾಪಂ ಪಿಡಿಓ, ಸಿಹೆಚ್ ಓ, ಆಶಾ ಕಾರ್ಯಕರ್ತೆಯರಿಗೆ ಒಂಟಿ ಮನೆಯಲ್ಲಿ ಪರಿಶೀಲನೆ ನಡೆಸಲು ತಿಳಿಸಲಾಗಿದೆ. ತಾಲ್ಲೂಕು ಮಟ್ಟದಲ್ಲಿ ನರ್ಸಿಂಗ್ ಹೋಮ್, ಕ್ಲಿನಿಕ್ ಗೆ ಭೇಟಿ ಕೊಟ್ಟು ಅನಧಿಕೃತವಾಗಿದ್ದರೆ ಸೀಜ್ ಮಾಡಲು ನಿರ್ದೇಶನ ನೀಡಲಾಗಿದೆ.
ಎಸಿ ಹಾಗೂ ಕುಟುಂಬ ಕಲ್ಯಾಣಧಿಕಾರಿ ಅವರು ಕೆ.ಆರ್.ಪೇಟೆಯ ಸ್ಕ್ಯಾನಿಂಗ್ ಸೆಂಟರ್ ಅನ್ನು ಸೀಜ್ ಮಾಡಿ ಪ್ರಕರಣ ದಾಖಲಿಸಿದ್ದಾರೆ.
ಮಾತ್ರವಲ್ಲದೇ ಹೆಣ್ಣು ಮಗುವಿನ ಜನನದ ಬಗ್ಗೆ, ಹೆಣ್ಣು ಭ್ರೂಣ ಹತ್ಯೆ, ಕಾನೂನಿನ ಬಗ್ಗೆ ಜಾಗೃತಿ ಮೂಡಿಸಲು ಸೂಚಿಸಲಾಗಿದ್ದು, ಸಿಎಚ್ ಓ ಗಳಿಗೂ ಕಾರ್ಯಾಗಾರ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.
ಭ್ರೂಣ ಹತ್ಯೆ ನಡೆಯದಂತೆ ಕಾನೂನು ಕ್ರಮ ಕೈಗೊಳ್ಳುತ್ತಿದ್ದೇವೆ. ಭ್ರೂಣ ಪತ್ತೆ, ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಸಂಪರ್ಕ ಮಾಡಿಲ್ಲ. ಕಾನೂನು ರೀತಿಯಲ್ಲಿ ನಾವು ವರದಿ ರೆಡಿ ಮಾಡ್ಕೊಂಡಿದ್ದೇವೆ. ಈಗಾಗಲೇ ಜಿಲ್ಲೆಯಲ್ಲಿ 13 ನರ್ಸಿಂಗ್ ಹೋಮ್ ಗಳಿಗೆ ಭೇಟಿ ಪರಿಶೀಲನೆ ಮಾಡಲಾಗಿದೆ. 1 ರಲ್ಲಿ ಮಾತ್ರ ರೆಡಿಯಲಾಜಿಸ್ಟ್ ಅನುಮತಿ ಪಡೆಯದ ಹಿನ್ನಲೆ ಸೀಜ್ ಮಾಡಿದ್ದೇವೆ ಎಂದು ಮಂಡ್ಯ ಡಿಎಚ್ ಓ ಡಾ.ಮೋಹನ್ ಹೇಳಿದ್ದಾರೆ.