Sunday, April 20, 2025
Google search engine

Homeರಾಜ್ಯಸಾರ್ವಜನಿಕರ ನೈಜತೆ ನೋಡಿಕೊಂಡು ವಿಧಾನಸಭೆಗೆ ಪಾಸ್ ವಿತರಿಸಲು ಸೂಚನೆ: ಯು.ಟಿ. ಖಾದರ್

ಸಾರ್ವಜನಿಕರ ನೈಜತೆ ನೋಡಿಕೊಂಡು ವಿಧಾನಸಭೆಗೆ ಪಾಸ್ ವಿತರಿಸಲು ಸೂಚನೆ: ಯು.ಟಿ. ಖಾದರ್

ಬೆಳಗಾವಿ: ವಿಧಾನಸಭೆಗೆ ಸಾರ್ವಜನಿಕರಿಗೆ ಪಾಸ್ ಕೊಡುವಾಗ ಅವರ ನೈಜತೆ ನೋಡಿಕೊಂಡು ಕೊಡಲು‌ ಸೂಚಿಸಲಾಗಿದೆ ಎಂದು ಸ್ಪೀಕರ್ ಯು.ಟಿ. ಖಾದರ್ ತಿಳಿಸಿದರು.

ಸುವರ್ಣಸೌಧದಲ್ಲಿ ಸಂಸತ್ತಿನ ಭದ್ರತಾ ಲೋಪದ ಕುರಿತು ಮಾತನಾಡಿ, ಅಧಿವೇಶನದ ಹಿನ್ನೆಲೆಯಲ್ಲಿ ಸುವರ್ಣ ಸೌಧದಲ್ಲಿ ಭದ್ರತೆ ಹೆಚ್ಚಳ ಮಾಡಲಾಗಿದೆ. ಸಂಸತ್ತಿನ ಗ್ಯಾಸ್ ಬಾಂಬ್ ನಮಗೆ ಎಚ್ಚರಿಕೆ ಘಂಟೆಯಾಗಿದೆ. ಯಾವಾಗ ಏನಾಗಬಹುದು ಅಂತ ಊಹೆ ಮಾಡಕ್ಕಾಗಲ್ಲ. ಜನಸಾಮಾನ್ಯರು ಸಹಕಾರ ಕೊಡಬೇಕು’ ಎಂದು ಮನವಿ ಮಾಡಿದರು.

”ಜನರಿಗೆ ಪಾಸ್ ಕೊಡುವಾಗ ಅವರ ನೈಜತೆ ನೋಡಿಕೊಂಡು ಪಾಸ್ ಕೊಡಲು‌ ಸೂಚಿಸಲಾಗಿದೆ. ವಿದ್ಯಾರ್ಥಿಗಳಿಗೆ, ಸತ್​ಪ್ರಜೆಗಳಿಗೆ ತೊಂದರೆ ಆಗದಂತೆ ಪಾಸ್ ವಿತರಿಸಲು ಸೂಚಿಸಲಾಗಿದೆ. ಹೆಚ್ಚು ತಪಾಸಣೆ ಮಾಡಿ ಮೂಲಕ ಸುವರ್ಣಸೌಧಕ್ಕೆ ಪ್ರವೇಶ ನೀಡಲಾಗುತ್ತದೆ. ಜನ ಸಾಮಾನ್ಯರು ಸಹಕರಿಸಬೇಕು” ಎಂದು ಮನವಿ ಮಾಡಿದರು.

ಇನ್ನು ಇದೇ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಸಂಸತ್ತಿನ ದಾಳಿ ಯಾರೇ ಮಾಡಿದರೂ ಖಂಡನೀಯ.‌ ಈ ಘಟನೆಯನ್ನು ನಾವು ತೀವ್ರವಾಗಿ‌ ಖಂಡಿಸುತ್ತೇವೆ. ಆದ್ರೆ, ಈ ಲೋಪಕ್ಕೆ ಜವಾಬ್ದಾರಿ ಯಾರು ಎಂದು ಪ್ರಶ್ನಿಸಿದರು.

ಇದೇ ಪಾಸ್ ನಮ್ಮವರು ಕೊಟ್ಟಿದ್ದಿದ್ರೆ ಪರಿಸ್ಥಿತಿ ಏನಾಗಿರ್ತಿತ್ತು? ಪಾಸ್ ಕೊಟ್ಟ ಮೈಸೂರು ಸಂಸದರನ್ನು ಯಾಕೆ ಇನ್ನೂ ವಿಚಾರಣೆ ಮಾಡಿಲ್ಲ? ಮಹುವಾ ಮೊಯಿತ್ರಾ ವಿಚಾರದಲ್ಲಿ ಈ ಸರ್ಕಾರ ಹೇಗೆ ನಡೆದುಕೊಳ್ತು? ಎಲ್ಲಿ ಹೋದ್ರು ನಿಮ್ಮ ಜೇಮ್ಸ್ ಬಾಂಡ್ ಅಜಿತ್ ದೋವಲ್? ಎಲ್ಲಿ ಹೋದ್ರು ಅಮಿತ್ ಶಾ? ಪ್ರತಾಪ್ ಸಿಂಹ ಇದರ ಬಗ್ಗೆ ಸ್ಪಷ್ಟನೆ ಕೊಡಲಿ ಎಂದು ಅವರು ಒತ್ತಾಯಿಸಿದರು.

RELATED ARTICLES
- Advertisment -
Google search engine

Most Popular