Tuesday, April 22, 2025
Google search engine

HomeUncategorizedರಾಷ್ಟ್ರೀಯಚರ್ಚೆಗೆ ಪಟ್ಟು: ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್ ರಾಜ್ಯಸಭೆಯಿಂದ ಅಮಾನತು

ಚರ್ಚೆಗೆ ಪಟ್ಟು: ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್ ರಾಜ್ಯಸಭೆಯಿಂದ ಅಮಾನತು

ನವದೆಹಲಿ: ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್ ಅವರನ್ನು ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ.

ಇಂದು ಗುರುವಾರ ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ನಿನ್ನೆ ಲೋಕಸಭೆಯಲ್ಲಿನ ಪ್ರಮುಖ ಭದ್ರತಾ ಲೋಪದ ಬಗ್ಗೆ ಸದಸ್ಯರು ಪ್ರಸ್ತಾಪಿಸಿದರು. ಈ ವೇಳೆ ತೀವ್ರ ಗದ್ದಲ, ಕೋಲಾಹಲವುಂಟಾಯಿತು.

ಸಂಸದ ಡೆರೆಕ್ ಒಬ್ರೇನ್ ಅವರನ್ನು ಅಶಿಸ್ತಿನ ವರ್ತನೆ ಹಿನ್ನೆಲೆಯಲ್ಲಿ ರಾಜ್ಯಸಭೆಯಿಂದ ಅಧಿವೇಶನ ಮುಗಿಯುವವರೆಗೆ ಅಮಾನತುಗೊಳಿಸಲಾಗಿದೆ. ರಾಜ್ಯಸಭಾ ಅಧಿವೇಶನದ ಒಂದು ಗಂಟೆಯ ನಂತರ, ವಿರೋಧ ಪಕ್ಷದ ಸಂಸದರು ಸದನದ ಬಾವಿಗೆ ಪ್ರವೇಶಿಸಿ, ಸಂಸತ್ತಿನ ಭದ್ರತಾ ಉಲ್ಲಂಘನೆಯ ಬಗ್ಗೆ ಚರ್ಚೆಗೆ ಒತ್ತಾಯಿಸಿದರು. ಈ ಉದ್ದೇಶಕ್ಕಾಗಿ ದಿನದ ಸಾಮಾನ್ಯ ಕಲಾಪವನ್ನು ಅಮಾನತುಗೊಳಿಸುವಂತೆ ಅವರು 28 ನೋಟಿಸ್‌ ಗಳನ್ನು ಸಲ್ಲಿಸಿದರು.

ರಾಜ್ಯಸಭಾ ಸದಸ್ಯ ಒಬ್ರಿಯಾನ್ ಘಟನೆಯ ಬಗ್ಗೆ ಚರ್ಚೆಗೆ ಒತ್ತಾಯಿಸಿದ್ದರು. ಡೆರೆಕ್ ಒಬ್ರಿಯಾನ್ ಅವರು ಸದನವನ್ನು ತಕ್ಷಣವೇ ತೊರೆಯಲು ಸಭಾಪತಿಗಳು ಸೂಚಿಸಿದರು. ತಾವು ಸಭಾಪತಿಗಳ ಮಾತನ್ನು ಪಾಲಿಸುವುದಿಲ್ಲ ಎಂದರು.

ಡೆರೆಕ್ ಒಬ್ರಿಯಾನ್ ಅವರು ನಿಯಮಗಳನ್ನು ಗೌರವಿಸುವುದಿಲ್ಲ ಎಂದು ಹೇಳಿದ್ದಾರೆ. ಇದು ಗಂಭೀರ ದುರ್ನಡತೆಯಾಗಿದ್ದು, ನಾಚಿಕೆಗೇಡಿನ ಸಂಗತಿಯಾಗಿದೆ. ಘಟನೆ ಎಂದು ರಾಜ್ಯಸಭಾ ಸಭಾಪತಿ ಜಗದೀಪ್ ಧನ್ ಕರ್ ಅವರು ತೃಣಮೂಲ ನಾಯಕನನ್ನು “ಅಶಿಸ್ತಿನ ನಡವಳಿಕೆ” ಕಾರಣ ನೀಡಿ ಸದನದಿಂದ ಹೊರನಡೆಯುವಂತೆ ಸೂಚಿಸಿ ಅಮಾನತು ಮಾಡಿದರು.

RELATED ARTICLES
- Advertisment -
Google search engine

Most Popular