Tuesday, April 22, 2025
Google search engine

Homeರಾಜ್ಯಮಂಗಳೂರು: ಡಿಸೆಂಬರ್ 16 ರಂದು 'ಬರಕ ಎಕ್ಸ್‌ಪ್ಲೋರಿಯ' ಪ್ರದರ್ಶನ

ಮಂಗಳೂರು: ಡಿಸೆಂಬರ್ 16 ರಂದು ‘ಬರಕ ಎಕ್ಸ್‌ಪ್ಲೋರಿಯ’ ಪ್ರದರ್ಶನ

ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರು ನಗರದ ಅಡ್ಯಾರ್ ನಲ್ಲಿರುವ ಬರಾಕ ಇಂಟರ್ ನ್ಯಾಶನಲ್ ಸ್ಕೂಲ್ & ಕಾಲೇಜಿನಲ್ಲಿ ಡಿಸೆಂಬರ್ 16 ರ ಶನಿವಾರದಂದು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿ ‘ಬರಕ ಎಕ್ಸ್‌ಪ್ಲೋರಿಯ’ ಎಂಬ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಇಸ್ಲಾಮಿಕ್ ಹೆಚ್ ಓಡಿ ಹನೀಫ್ ಬೋಳಂತೂರು ತಿಳಿಸಿದ್ದಾರೆ.

ಅವರು ಮಂಗಳೂರು ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಕಿಂಡರ್‌ಗಾರ್ಟನ್‌ ನಿಂದ ಪದವಿವರೆಗಿನ ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ಮಾರ್ಗದರ್ಶನ ಹಾಗೂ ಸ್ವ ಪರಿಶ್ರಮದಿಂದ ತಯಾರಿಸಿದ ಮಾದರಿ ಹಾಗೂ ಆಟಗಳನ್ನು ಪ್ರದರ್ಶಿಸುವ ಕಾರ್ಯಕ್ರಮವಾಗಿದೆ. ಬೆಳಗ್ಗೆ 9.30ರಿಂದ ಸಂಜೆ 4.30ರವರೆಗೆ ಈ ಪ್ರದರ್ಶನ ನಡೆಯಲಿದೆ ಎಂದರು.

ವಿಜ್ಞಾನ, ಸಮಾಜ ವಿಜ್ಞಾನ, ಗಣಿತ, ಭಾಷಾ ವಿಷಯಗಳ ಕುರಿತು ಆಕರ್ಷಕ ಹಾಗೂ ವಿಶೇಷ ಚಟುವಟಿಕೆಗಳು, ಮದರಂಗಿ ಕೌಂಟರ್, ನಮ್ಮ ಊರ ವಿಶೇಷತೆಗಳು, ಕುರ್‌ʼಆನ್ ಹಾಗೂ ವಿಜ್ಞಾನ, ಹಿಜಾಮ, ಹಜ್ ಟೂರ್, ಚಂದ್ರಯಾನ ಉಡಾವಣೆ ಕಿರುನೋಟ ಮೊದಲಾದ ಪ್ರದರ್ಶನದ ಜತೆ ವಿದ್ಯಾರ್ಥಿಗಳಿಂದ ವೇದಿಕೆಯಲ್ಲಿ ಕರಾಟೆ, ಮೋಜಿನ ಆಟಗಳ ಪ್ರದರ್ಶನವೂ ನಡೆಯಲಿದೆ ಎಂದು ಅವರು ವಿವರಿಸಿದರು.

ಇದೇ ವೇಳೆ ಬರಕಾ ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಅಶ್ರಫ್ ಮಾತನಾಡಿ,  ಕಿಂಡರ್‌ಗಾರ್ಡನ್‌ನಿಂದ ಪಿಯುಸಿಯವರೆಗೆ ಸಿಬಿಎಸ್‌ಸಿ ಪಠ್ಯಕ್ರಮದಡಿ ಶಿಕ್ಷಣ ನೀಡಲಾಗುತ್ತಿದ್ದು, ಒಟ್ಟು 1200ರಷ್ಟು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ ಎಂದರು.

ಸುದ್ದಿಗೋಷ್ಟಿಯಲ್ಲಿ ಇಸ್ಲಾಮಿಕ್ ಶಿಕ್ಷಕ ಶಕೀಬ್ ಶರೀಫ್ ಉಮ್ರಿ, ನಿರ್ದೇಶಕ ಮುಹಮ್ಮದ್ ಅಯಾನ್, ಮ್ಯಾನೇಜರ್ ಶಮೀರ್ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular