ಮೈಸೂರು: ನಗರದ ಚಾಮುಂಡಿ ಬೆಟ್ಟದ ತಪ್ಪಲಿನ ಶಬರಿಮಲೆ ಶ್ರೀ ಅಯ್ಯಪ್ಪ ಪೂಜಾ ಸಮಿತಿಯ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ೬೩ನೇ ವಾರ್ಷಿಕ ಪೂಜಾ ಮಹೋತ್ಸವವನ್ನು ಡಿ.೧೬ರಿಂದ ಮೂರು ದಿನಗಳ ವಿವಿಧ ಪೂಜಾ ಕಾರ್ಯ ನಡೆಯಲಿದೆ.
ಇಂದು ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಅವರು ೬೩ನೇ ವಾರ್ಷಿಕ ಪೂಜಾ ಮಹೋತ್ಸವದಂದು ಪಳ್ಳಿಯುಣರ್ತಲ್, ಗಣಪತಿ ಹೋಮಂ, ತುಪ್ಪದ ಅಭಿಷೇಕ ವಾದ್ಯದೊಂದಿಗೆ ಶ್ರೀ ಅಯ್ಯಪ್ಪ ಸ್ವಾಮಿಗೆ ಅಲಂಕಾರ ಪೂಜಾ, ಎಡಕ್ಕದೊಂದಿಗೆ ಅಷ್ಟಪತಿ ಗಾನಂ, ವಾದ್ಯಕಲಾರತ್ನ ಪಯ್ಯಾವೂರು ಗೋಪಾಲನ್ ಕುಟ್ಟಿ ಮಾರಾರ್ ವಿದ್ಯಾರಣ್ಯಪುರಂನಲ್ಲಿರುವ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಿಂದ ಪಾಲಕ್ಕೊಂಬು ಮೆರವಣಿಗೆ ಜೊತೆಗೆ ನಂದಿಕಂಬ, ಮೈಸೂರು ಯದುಕುಮಾರ್ ಮತ್ತು ತಂಡದವರಿಂದ ನಾದಸ್ವರ ಮಂಗಳವಾದ್ಯದೊಂದಿಗೆ ಪಂಚವಾದ್ಯ, ಕೀಲುಕ ಸುರೆ, ವೆಲಿಚಪ್ಪಾಡ್ ನೃತ್ಯದೊಂದಿಗೆ ಚಾಮುಂಡಿಪುರಂ, ನಂಜುಮಳಿಗೆ ವೃತ್ತ, ತ್ಯಾಗರಾಜ ವೃತ್ತ, ಬಸವೇಶ್ವರಸರ್ಕಲ್, ನಂಜನಗೂಡು ರಸ್ತೆಗೆ ಬಂದು ದೇವಾಲಯ ತಲುಪಲಿದೆ ಎಂದರು. ಸುದ್ದಿಗೋಷ್ಠಿ ಯಲ್ಲಿ ಸಮಿತಿಯ ಉಪಾಧ್ಯಕ್ಷ ಕೃಷ್ಣೋಜಿರಾವ್, ಉಸ್ತುವಾರಿ ಸುನೀಲ್ ಕುಮಾರ್, ಖಜಾಂಚಿ ಇ.ಎನ್.ಸುರೇಶನ್, ಕೆ.ಎನ್.ಬಸವರಾಜು ಇನ್ನಿತರರು ಹಾಜರಿದ್ದರು.