ಮಂಡ್ಯ: ಹಳೆ ವೈಷಮ್ಯ ಹಿನ್ನಲೆ ಮಾರಾಕಸ್ತ್ರಗಳಿಂದ ಕತ್ತು ಕೊಯ್ದು ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ ಮಂಡ್ಯ ನಗರದ ಫ್ಯಾಕ್ಟರಿ ಸರ್ಕಲ್ ಬಳಿಯ ಬಾರ್ ಒಂದರ ಬಳಿ ನಡೆದಿದೆ.
ಸ್ವರ್ಣಸಂದ್ರ ಬಡಾವಣೆಯ ನಿವಾಸಿ ಗುರು ವಿಲಾಸ್(34) ಮೃತ ವ್ಯಕ್ತಿ.
ಬಾರ್ ನಲ್ಲಿ ಕುಡಿದು ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.
ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.