ಮೈಸೂರು: ನಗರದ ಜೆ.ಕೆ.ಮೈದಾನದಲ್ಲಿ ಸ್ವರಾಂಜಲಿ ತಂಡದ ವತಿಯಿಂದ ಡಿ.೧೭ರಂದು ಭಾನುವಾರ ಸಂಜೆ ೫ ಗಂಟೆಗೆ ಹಿರಿಯ ನಾಗರೀಕರಿಗಾಗಿ ಸಂಧ್ಯಾ ಸಂಭ್ರಮ ಕಾರ್ಯಕ್ರಮ ಆಯೋಜಿಲಾಗಿದೆ.
ಇಂದು ಶುಕ್ರವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು ಸ್ವರಾಂಜಲಿ ಡಿ.೧೭ ರಂದು ಸ್ವರ ಸಂಭ್ರಮ ಆಯೋಜಕಿ ಕಾರ್ಯದರ್ಶಿ ರೂಪಶ್ರೀ ಶೇಷಾದ್ರಿ, ಈ ವರ್ಷ ಡಿ.೧೭ ರಂದು ಸಂಧ್ಯಾ ಸಂಭ್ರಮ ನಗರದ ಜೆ.ಕೆ.ಮೈದಾನದಲ್ಲಿ ಎಂಎಂಸಿ ಕಾಲೇಜಿನ ಅಮೃತ ಮಹೋತ್ಸವ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಆಯೋಜಿಲಾಗಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮಕ್ಕೆ ಚಂದನ ವಾಹಿನಿಯ ಥಟ್ ಅಂತ ಹೇಳಿ ಡಾ.ನಾ.ಸೋಮೇಶ್ವರ್ ಹಾಗೂ ವಾಗ್ನಿ ಪ್ರೊ.ಕೃಷ್ಣೇಗೌಡ ಆಗಮಿಸಲಿದ್ದಾರೆ. ಹಿರಿಯ ನಾಗರೀಕರಿಗೆ ಡಿ.೧೭ ರಂದು ಬೆಳಿಗ್ಗೆ ೧೦ ಕ್ಕೆ ರಸಪ್ರಶ್ನೆ, ಮೌಖಿಕ ಸ್ಪರ್ಥೆ, ಸಂಜೆ ಸಂ.೭ ಕ್ಕೆ ಬಹುಮಾನ ವಿತರಣೆ ನಡೆಯಲಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಂಸ್ಥಾಪಕ ಡಾ.ರಘುವೀರ್, ಸದಸ್ಯ ಆನಂದ ಮಾಧವ, ಡಾ.ಲಾವಣ್ಯ ಇತರರು ಇದ್ದರು. ಹೆಚ್ಚಿನ ಮಾಹಿತಿಗಾಗಿ ಮೊ.೯೯೧೬೮೩೦೦೧೯, ೯೬೬೩೯೭೭೯೪೯ ಸಂಪರ್ಕಿಸಬಹುದು.