ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯರವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಂದ ಬಡವರು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಆಶ್ರಯಸಮಿತಿ ಅಧ್ಯಕ್ಷ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ವರುಣಾಕ್ಷೇತ್ರದ ತಾಂಡವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಯಾ,ಅಡಕನಹಳ್ಳಿಹುಂಡಿ, ತಾಂಡವಪುರ , ಚಿಕ್ಕಯ್ಯನ ಛತ್ರ, ಬಂಚಳ್ಳಿ ಹುಂಡಿ ಗ್ರಾಮಗಳಿಗೆ ಭೇಟಿನೀಡಿ ಕಂದಾಯ ಅದಾಲತ್, ಪಿಂಚಣಿ ಅದಾಲತ್, ಸಭೆನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಹೆಬ್ಯಾ ಗ್ರಾಮದಲ್ಲಿ ಮಾತನಾಡಿದ ಅವರು ನಿಮ್ಮೆಲ್ಲರ ಆರ್ಶೀವಾದದಿಂದ ಸಿದ್ದರಾಮಯ್ಯರವರು ೨ನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ. ನಿಮ್ಮ ಗ್ರಾಮಕ್ಕೆ ಸಿ.ಸಿ.ರಸ್ತೆ, ಬಸ್‌ಬೇಕು, ಸ್ಮಶಾನ ಅಭಿವೃದ್ಧಿ, ಅಂಬೇಡ್ಕರ್ ಭವನ, ದೇವಸ್ಥಾನ, ಸೇತುವೆ ನಿರ್ಮಾಣ, ಯುಜಿಡಿ, ವಿದ್ಯುತ್ ಕಂಬ, ಪೌರಕಾರ್ಮಿಕರಿಗೆ ನಿವೇಶನ ಸೇರಿದಂತೆ ೨೦ ಕಾಮಗಾರಿಗಳ ಪಟ್ಟಿ ನೀಡಿದ್ದೀರಿ. ನಿಮ್ಮ ಎಲ್ಲಾ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಈ ಅವಧಿಯಲ್ಲಿ ಮಾಡಿಕೊಡಲು ಪ್ರಯತ್ನ ಮಾಡುತ್ತೇನೆ. ಗೃಹಲಕ್ಷ್ಮಿ ಹಣ ನೊಂದಾಯಿಸಿಕೊಂಡಿರುವ ಪ್ರತಿಯೊಬ್ಬರಿಗೂ ಬರುತ್ತದೆ, ಮಹಿಳೆಯರು ಆತಂಕಪಡಬೇಕಾಗಿಲ್ಲ. ೧೫೦ ಜನ ಪೌರಕಾರ್ಮಿಕರಿಗೆ ಎಲ್ಲೆಲ್ಲಿ ನಿವೇಶನಗಳಿವೆ ಗುರುತಿಸಿ ಆಯಾ ಗ್ರಾಮಗಳಲ್ಲಿ ನಿವೇಶನ ಕೊಡಲು ಕ್ರಮ ಕೈಗೊಳ್ಳವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿ.ಪಂ. ಮಾಜಿಅಧ್ಯಕ್ಷ ಬಿ.ಎಂ.ರಾಮು, ಗ್ರಾ.ಪಂ.ಅಧ್ಯಕ್ಷೆ ನಾಗಮ್ಮ, ಉಪಾಧ್ಯಕ್ಷ ಶಿವಣ್ಣ, ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಕೆ.ಎನ್.ವಿಜಯ್, ಆಪ್ತ ಸಹಾಯಕರಾದ ಶಿವಸ್ವಾಮಿ, ಪ್ರದೀಪ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ, ಪಿಡಿಒ ಪ್ರಕಾಶ್, ಗ್ರಾ.ಪಂ ಸದಸ್ಯರಾದ ನಾಗವೇಣಿ, ರೇವಮ್ಮ, ಸುಧಾರಾಣಿ, ಭಾಗ್ಯ, ಇಒ ಜೆರಾಲ್ಡ್‌ರಾಜೇಶ್, ಸಿಡಿಪಿಒ ಮಂಜುಳಾ, ಸರ್ಕಲ್ ಇನ್ಸ್‌ಪೆಕ್ಟರ್ ಸುನಿಲ್‌ಕುಮಾರ್, ಮುಖಂಡರಾದ ರಾಜು, ಬಾಕನಹುಂಡಿ ಶಿವು, ಹಿನಕಲ್ ಉದಯ್, ಎಪಿಎಂಸಿ ಮಾಜಿ ಸದಸ್ಯ ಬಸವರಾಜು ಹಾಜರಿದ್ದರು.