Monday, April 21, 2025
Google search engine

Homeಸ್ಥಳೀಯವಕೀಲರ ವಿಧೇಯಕ ತಿದ್ದುಪಡಿಗೆ ಸಮಿತಿ ಅಧ್ಯಕ್ಷ ತಿಮ್ಮಯ್ಯ ಮನವಿ

ವಕೀಲರ ವಿಧೇಯಕ ತಿದ್ದುಪಡಿಗೆ ಸಮಿತಿ ಅಧ್ಯಕ್ಷ ತಿಮ್ಮಯ್ಯ ಮನವಿ

ಮೈಸೂರು: ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕ-೨೦೨೩ ಅನ್ನು ಅಂಗೀಕರಿಸಿದ ಸರ್ಕಾರವನ್ನು ಸ್ವಾಗತಿಸುತ್ತಾ, ಮುಂದಿನ ಅಧಿವೇಶನದಲ್ಲಿ ತಿದ್ದುಪಡಿಗಳನ್ನು ಮಾಡುವಂತೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ತಿಮ್ಮಯ್ಯ ಮನವಿ ಮಾಡಿದ್ದಾರೆ.

ಇಂದು ಶನಿವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ವಕೀಲರ ವಿಧೇಯಕ ಅಂಗೀಕರಿಸಿರುವುದಕ್ಕೆ ಸರ್ಕಾರವನ್ನು ಅಭಿನಂದಿಸುತ್ತೇವೆ. ಆದರೆ, ಕಲಂ ೪ರ ನ್ಯಾಯವಾದಿಗಳಿಗೆ ಸಂಬಂಧಿಸಿದ ಅಪರಾಧಗಳಿಗೆ ಶಿಕ್ಷೆಯ ಪ್ರಮಾಣವನ್ನು ೩ ವರ್ಷದಿಂದ ೭ ವರ್ಷದವರೆಗೆ ವಿಸ್ತರಿಸಬೇಕು. ಕಲಂ ೫ರ ಅಪರಾಧ ಸಂಜೇಯುತ ದಂಡನೀಯವಾದ ಪ್ರತಿಯೊಂದು ಅಪರಾಧವು ಅಸಂಜೇಯವಾಗಿರತಕ್ಕದ್ದಾಗಿದೆ. ಸಂಬಂಧ ಪಟ್ಟ ವಕೀಲರ ಸಂಘಕ್ಕೆ ಮಾಹಿತಿ ನೀಡಬೇಕೆಂಬ ಸುಪ್ರೀಂ ಕೋರ್ಟ್ ಆದೇಶವನ್ನು ಕಾಯಿದೆಯಲ್ಲಿ ತಿದ್ದುಪಡಿ ಮಾಡಿ ಜಾರಿಗೆ ತರಬೇಕೆಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ರಾಜ್ಯ ಕಾನೂನು ಘಟಕದ ಉಪಾಧ್ಯಕ್ಷ ಪಾಳ್ಯ ಸುರೇಶ್, ಪ್ರಧಾನ ಕಾರ್ಯದರ್ಶಿ ಎ.ಆರ್.ಕಾಂತರಾಜು, ಕಾರ್ಯದರ್ಶಿ ಪುಟ್ಟರಸ, ಜಿಲ್ಲಾ ಉಪಾಧ್ಯಕ್ಷ ಪಿ.ಬಿ.ಅಭಿಷೇಕ್ ಮತ್ತಿತರರು ಇದರು.

RELATED ARTICLES
- Advertisment -
Google search engine

Most Popular