ಕೆ.ಆರ್. ನಗರ : ಈ ತಿಂಗಳು ನಡೆಯುವ ಹನುಮ ಜಯಂತಿಯನ್ನು ಶಾಂತಿ ಮತ್ತು ಸುವ್ಯವಸ್ಥೆಯಿಂದ ಹಾಗೂ ಯಾವುದೇ ರೀತಿಯ ಅಹಿತಕರ ಘಟನೆಯನ್ನು ನಡೆಯದಂತೆ ಎಚ್ಚರಿಕೆ ವಹಿಸಬೇಕೆಂದು ಮಾರುತಿ ಯುವಕ ಸಂಘದ ಸದಸ್ಯರು ಮತ್ತು ಹನುಮ ಭಕ್ತರಿಗೆ ಸರ್ಕಲ್ ಇನ್ಸ್ಪೆಕ್ಟರ್ ಪಿ. ಪಿ .ಸಂತೋಷ್ ಸಲಹೆ ನೀಡಿದರು.
ಕೆ.ಆರ್.ನಗರ ಪಟ್ಟಣದ ಅರಕ್ಷಕ ಠಾಣೆಯ ಸಭಾಂಗಣದಲ್ಲಿ ನಡೆದ ಮಾರುತಿ ಯುವಕ ಸಂಘ ಮತ್ತು ಹನುಮ ಜಯಂತಿಯ ಆಚರಣ ಪದಾಧಿಕಾರಿಗಳು ಹಾಗೂ ಮುಸ್ಲಿಂ ಮುಖಂಡರ ಶಾಂತಿ ಸುವ್ಯವಸ್ಥೆಯ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಯಾವುದೇ ಜಯಂತಿಗಳು ಮತ್ತು ಕಾರ್ಯಕ್ರಮಗಳನ್ನು ನಡೆಸುವ ವೇಳೆ ಯಾವುದೇ ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರಿಕೆಯಿಂದ ಕಾರ್ಯಕ್ರಮ ಮಾಡುವಂತೆ ತಿಳಿಸಿದರು.
ಹನುಮ ಜಯಂತಿಯ ಆಚರಣೆಯ ವೇಳೆ ಮೆರವಣಿಗೆ ಹೋಗುವ ಬೀದಿಗಳು ಮತ್ತು ಜನಸಂಖ್ಯೆಯ ಮಾಹಿತಿಯನ್ನು ಮೊದಲೇ ಪೊಲೀಸ್ ಠಾಣೆಗೆ ತಿಳಿಸಿ ಅನುಮತಿಯನ್ನು ಪಡೆಯುವುದು ಕಡ್ಡಾಯವಾಗಿದೆ ಮೆರವಣಿಗೆಯ ವೇಳೆ ಜಯಗೂಷ ಮತ್ತು ಸೌಂಡ್ ಬರುವ ರೀತಿಯಲ್ಲಿ ಮೈಕ್ ಬಳಕೆ ಮಾಡಕೂಡದು ಹಾಗೂ ಅತಿಥಿ ಗಣ್ಯರು ಯಾರಾದರೂ ಬರುವುದಿದ್ದರೆ ಅದನ್ನು ಮೊದಲೇ ಠಾಣಿಗೆ ತಿಳಿಸಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲು ಅನುವು ಮಾಡಿಕೊಡುವಂತೆಯೂ ತಿಳಿಸಿದರು.
ಕೆ ಆರ್ ನಗರ ಪಟ್ಟಣ ಇಲ್ಲಿಯವರೆಗೂ ಹನುಮ ಜಯಂತಿ ಕಾರ್ಯಕ್ರಮವು ಯಶಸ್ವಿಯಾಗಿ ನಡೆದಿದ್ದು ಮುಂದೆಯೂ ಯಶಸ್ವಿಯಾಗಿ ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಹೊಣೆಯಾಗಿದೆ ನಾವು ನಿಮಗೆ ಸಹಕಾರ ನೀಡುತ್ತೇವೆ ನೀವು ಸಹ ನಮಗೆ ಸಹಕಾರ ನೀಡಿ ನಿಮ್ಮ ಜೊತೆಯಲ್ಲಿರುವ ಕೆಲವು ಕಿಡಿಗೇಡಿಗಳು ಮೆರವಣಿಗೆ ಮತ್ತು ಕಾರ್ಯಕ್ರಮದ ವೇಳೆ ಗೊಂದಲ ಉಂಟು ಮಾಡಲು ಪ್ರಯತ್ನಿಸಿದರೆ ಅಂತವರ ಮಾಹಿತಿಯನ್ನು ನಮಗೆ ನೀಡಿ ಎಂದು ತಿಳಿಸಿದರು.
ಪಟ್ಟಣದ ಮುಸ್ಲಿಂ ಮುಖಂಡರು ನಮಗೆ ಇಲ್ಲಿ ಹನುಮ ಭಕ್ತರು ಸಹಕಾರ ನೀಡುತ್ತಾರೆ ನಾವು ಸಹ ಅವರಿಗೆ ಸಹಕಾರ ನೀಡುತ್ತೇವೆ ಎಂಬ ಭರವಸೆಯನ್ನು ನೀಡಿದ್ದು ಆದ್ದರಿಂದ ಹಿಂದೂ ಮುಸ್ಲಿಂ ಒಂದೇ ಕುಟುಂಬವಿದಂತೆ ಸೋದರ ಬಾಳ್ವೆಯಿಂದ ಬಾಳುವಂತೆ ಸಲಹೆ ನೀಡಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಪಿಎಸ್ಐ ಧನರಾಜ್, ಆರ್ ಸ್ವಾಮಿ ಗೌಡ, ಮುಸ್ಲಿಂ ಮುಖಂಡ ಅಬ್ಸರ್ ಬಾಬು ಮಾತನಾಡಿದರು. ಸಭೆಯಲ್ಲಿ ಕೃಷ್ಣ ಭಟ್ ,ಗೌತಮ್ ಜಾದವ್, ಮಂಜು ಕೆಂಚಿ, ದರ್ಶನ್ ,ಉಜ್ವಲ್, ಕರುಣಾಕರ, ಪುನೀತ್, ನಂಜುಂಡ ,ಪೊಲೀಸ್ ಸಿಬ್ಬಂದಿಗಳಾದ ಮಂಜು ಧನಂಜಯ, ಜವರೇಶ, ಹರೀಶ, ಸೇರಿದಂತೆ ಇನ್ನಿತರರು ಹಾಜರಿದ್ದರು.