ಮಂಡ್ಯ :ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಸಮೀಪದ ಗಂಜಾಂ ಬಳಿಯ ಕಾವೇರಿ ದಂಡೆಯಲ್ಲಿ ನೆಲೆಸಿರುವ ಶಕ್ತಿ ದೇವತೆ ನಿಮಿಷಾಂಬ ದೇಗುಲ ಶ್ರೀಮಂತ ದೇಗುಲವಾಗಿ ಹೊರಹೊಮ್ಮಿದ್ದು, ಆದಾಯದಲ್ಲಿ ಶ್ರೀರಂಗನಾಥ ಹಾಗೂ ಚೆಲುವನಾರಾಯಣ ಸ್ವಾಮಿಯನ್ನು ಹಿಂದಿಕ್ಕಿದ ತಾಯಿ ನಿಮಿಷಾಂಭೆ.
ವಾರ್ಷಿಕ 5.92 ಕೋಟಿ ಆದಾಯ ತರುವ ಮುಜರಾಯಿ ಇಲಾಖೆಯ “ಎ” ದರ್ಜೆಯ ದೇಗುಲವಾಗಿದ್ದು, ವರ್ಷದಿಂದ ವರ್ಷಕ್ಕೆ ನಿಮಿಷಾಂಬ ದೇಗುಲದಲ್ಲಿ ವಾರ್ಷಿಕ ಆದಾಯ ಹೆಚ್ಚುತ್ತಿದ್ದು ಪ್ರಬಲ ಶಕ್ತಿ ದೇವತೆಗಳಲ್ಲಿ ತಾಯಿ ನಿಮಿಷಾಂಬ ದೇವಿಯು ಒಂದಾಗಿದ್ದಾಳೆ. ತಾಯಿ ಪವಾಡದಿಂದ ದೇಗುಲಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲೂ ಗಣನೀಯ ಏರಿಕೆಯಾಗಿದ್ದು ಪ್ರತಿ ಹುಣ್ಣಿಮೆ ಹಾಗೂ ಅಮಾವಾಸ್ಯೆ ದಿನ ದೇಗುಲಗಳಲ್ಲಿ ವಿಶೇಷವಾಗಿ ಪೂಜೆ ನಡೆಸಲಾಗುತ್ತದೆ.