Sunday, April 20, 2025
Google search engine

Homeಸ್ಥಳೀಯಡಿಸೆಂಬರ್ 20ರರಂದು ಸಂತ ಫಿಲೋಮಿನಾ ಕಾಲೇಜಿನಲ್ಲಿ(ಸ್ವಾಯತ್ತ) ಎಂಬಿಎ ಮತ್ತು ಎಂಸಿಎ ಪ್ರಾರಂಭೋತ್ಸವ ಕಾರ್ಯಕ್ರಮ

ಡಿಸೆಂಬರ್ 20ರರಂದು ಸಂತ ಫಿಲೋಮಿನಾ ಕಾಲೇಜಿನಲ್ಲಿ(ಸ್ವಾಯತ್ತ) ಎಂಬಿಎ ಮತ್ತು ಎಂಸಿಎ ಪ್ರಾರಂಭೋತ್ಸವ ಕಾರ್ಯಕ್ರಮ

ಮೈಸೂರು: ಸಂತ ಫಿಲೋಮಿನಾ ಕಾಲೇಜು(ಸ್ವಾಯತ್ತ) ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಮುಂಚೂಣಿಯಲ್ಲಿದ್ದು, ಈ ಶೈಕ್ಷಣಿಕ ಸಾಲಿನಲ್ಲಿ ಎಂಬಿಎ ಮತ್ತು ಎಂಸಿಎ ಕಾರ್ಯಕ್ರಮಗಳನ್ನು  ಪ್ರಾರಂಭಿಸಲಾಗುತ್ತಿದೆ.

ಎಂಬಿಎ ಮತ್ತು ಎಂಸಿಎ ಕಾರ್ಯಕ್ರಮಗಳ ಪ್ರಾರಂಭೋತ್ಸವ ಕಾರ್ಯಕ್ರಮವು ಡಿಸೆಂಬರ್ 20ರ ಸಂಜೆ 4 ಗಂಟೆಗೆ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು   ಮೈಸೂರು ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ಡಾ.ಬರ್ನಾರ್ಡ್ ಮೊರಾಸ್ ಅವರು ವಹಿಸಲಿದ್ದು, ಬೆಂಗಳೂರಿನ XIME  ಅಧ್ಯಕ್ಷರಾದ ಜೆ.ಪಿಲಿಪ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಉಪ ಕುಲಪತಿ ಪ್ರೊ.ಎನ್ ಕೆ ಲೋಕನಾಥ್ ಮತ್ತು ನವದೆಹಲಿಯ ಯುಜಿಸಿ ಶೈಕ್ಷಣಿಕ ಅಧಿಕಾರಿ ಡಾ.ಲತಾ ಕೆ ಸಿ ಭಾಗವಹಿಸಲಿದ್ದಾರೆ.

ಎಂಸಿಎ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಅತ್ಯವಶ್ಯಕವಾದ ಮುಂದಿನ ಪೀಳಿಗೆಯ ಐಟಿ ಕುಶಲ ವೃತ್ತಿ ನಿರತ ತರಬೇತಿಗೆಂದು, ತಂತ್ರಾಂಶ ಅಭಿವೃದ್ಧ, ಡೇಟಾ ಬೇಸ್, ಸಿಸ್ಟಂ ವಿಶ್ಲೇಷಣೆ, ಈ ವಿಷಯಗಳಲ್ಲಿ ಪರಿಣಿತಿಯನ್ನು ಪಡೆದುಕೊಳ್ಳಲು ಅವಕಾಶವಾಗುವಂತೆ ಪಠ್ಯಕ್ರಮವನ್ನು ರೂಪಿಸಿ, ಅನುಭವ ಹೊಂದಿದ ಶಿಕ್ಷಕರುಗಳಿಂದ ಬೋಧಿಸಲಾಗುವುದು ಎಂದು ಸಂತ ಫಿಲೋಮಿನಾ ಶಿಕ್ಷಣ ಸಂಸ್ಥೆಗಳ ರೆಕ್ಟರ್ ರೆವರೆಂಡ್ ಡಾ.ಬರ್ನಾಡ್ ಪ್ರಕಾಶ್ ಬಾರ್ನಿಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಂಬಿಎ ಮತ್ತು ಎಂಸಿಎ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕಾಲೇಜಿನ ಜಾಲತಾಣ https://stphilos.ac.in/ ಕ್ಕೆ ಭೇಟಿ ನೀಡಲು ಕೋರಲಾಗಿದೆ.

RELATED ARTICLES
- Advertisment -
Google search engine

Most Popular