ಮಂಡ್ಯ: ಮಂಡ್ಯ ನಗರದ ಹೊಳಲು ವೃತ್ತದಲ್ಲಿರುವ ಬೀದಿ ಬದಿಯ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿಯ ನರ್ತನಕ್ಕೆ ಅಂಗಡಿ, ತಳ್ಳುವ ಗಾಡಿ ಸುಟ್ಟು ಕರಕಲಾಗಿದೆ.
ಮಹದೇವ, ರಾಧಮ್ಮ ಎಂಬುವವರಿಗೆ ಸೇರಿದ ಅಂಗಡಿಗಳಲ್ಲಿ ಇಂದು ಬೆಳಗಿನ ಜಾವ 3.30 ರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮೊದಲು ಒಂದು ಹಣ್ಣಿನ ಅಂಗಡಿಯಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲೆ ಮತ್ತೊಂದು ಅಂಗಡಿಗೆ ಆವರಿಸಿದ್ದು, ಎರಡು ಹಣ್ಣಿನ ಅಂಗಡಿ, ತಳ್ಳುವ ಗಾಡಿಗಳು ಸುಟ್ಟು ಭಸ್ಮವಾಗಿದೆ.

ಬೆಂಕಿ ಕಾಣಿಸಿಕೊಳ್ತಿದ್ದಂತೆ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಬೆಂಕಿ ನಂದಿಸುವ ಮುನ್ನವೇ ಹಣ್ಣುಗಳು, ಅಂಗಡಿಯಲ್ಲಿದ್ದ ವಸ್ತುಗಳು ಸುಟ್ಟು ಭಸ್ಮವಾಗಿವೆ.
ಯಾರೋ ಕಿಡಿಗೇಡಿಗಳು ಉದ್ದೇಶ ಪೂರ್ವಕವಾಗಿ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದ್ದು, ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.