ಚಿತ್ರದುರ್ಗ: ವಿವಿ ಸಾಗರ ಐಬಿಯಲ್ಲಿ ಇಸ್ಪೀಟ್ ಆಡುತ್ತಿದ್ದ 14 ಮಂದಿಯನ್ನು ಬಂಧಿಸಿರುವ ಘಟನೆ ಚಿತ್ರದುರ್ಗದ ಹಿರಿಯೂರಿನಲ್ಲಿ ನಡೆದಿದೆ.
ಬಂಧಿತರದಲ್ಲಿ ನಗರಭೆ ಸದಸ್ಯ ಜಗದೀಶ್ ಕೂಡ ಒಬ್ಬರು.
ಇಸ್ಪೀಟು ಆಡುತ್ತಿರುವ ಮಾಹಿತಿ ಪಡೆದ ಪೊಲೀಸರು ಚಿತ್ರದುರ್ಗ ಎಸ್ ಪಿ ಧರ್ಮೇಂದರ್ ಕುಮಾರ್ ಮೀನಾ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣೆ ಸಿಪಿಐ ಕಾಳಿಕೃಷ್ಣ ಅಂಡ್ ಟೀಂ ದಾಳಿ ನಡೆಸಿ ಇಸ್ಪೀಟ್ ಆಟದಲ್ಲಿ ತೊಡಗಿದ್ದವರನ್ನು ಬಂಧಿಸಿದ್ದಾರೆ.
ಬಂಧಿತರಿಂದ 4 ಲಕ್ಷದ 37 ಸಾವಿರ ಹಣ ವಶಕ್ಕೆ ಪಡೆಯಲಾಗಿದೆ. ದಾಳಿ ವೇಳೆ ಮತ್ತಿಬ್ಬರು ನಗರಸಭೆ ಸದಸ್ಯರಾದ ಅನೀಲ್ ಕುಮಾರ್, ಅಜ್ಜಪ್ಪ ಪರಾರಿಯಾಗಿದ್ದಾರೆ.
ಈ ಸಂಬಂಧ ಒಟ್ಟು 3 ನಗರಸಭೆ ಸದಸ್ಯರು ಹಾಗೂ ಐಬಿ ಮೇಟಿ ಸೇರಿ ಹಲವರ ವಿರುದ್ದ ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ.