ರಾಮನಗರ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆ ಕೂಲಿ ಕಾರ್ಮಿಕರ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಕ್ಕಳ ಆರೈಕೆಗೆ ಕೂಸಿನ ಮನೆ ನಿರ್ಮಾಣ ಮಾಡಿ ೩ ವರ್ಷದ ಒಳಗಿನ ಮಕ್ಕಳಿಗೂ ಆರೈಕೆ ಸಿಗಲಿದೆ.ಮಕ್ಕಳ ಪೋಷಣೆಕೇರ್ ಟೇಕರ್ಸ್‌ಗಳ ದೊಡ್ಡಜವಾಬ್ದಾರಿ, ಮಕ್ಕಳನ್ನು ಮಾತೃತ್ವ ಭಾವದಿಂದ ನೋಡಿಕೊಳ್ಳಿ ಎಂದು ರಾಮನಗರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರದೀಪ್ ಅವರು ತಿಳಿಸಿದರು.
ಅವರು ರಾಮನಗರ ತಾಲ್ಲೂಕು ವ್ಯಾಪ್ತಿಯ ಗ್ರಾಮ ಪಂಚಾಯತಿಗಳ ಶಿಶುಪಾಲನ ಕೇಂದ್ರದಕೇರ್ ಟೇಕರ್ಸ್‌ಗಳ ತರಬೇತಿ ಕಾರ್ಯಕ್ರಮಕ್ಕೆಚಾಲನೆ ನೀಡಿಮಾತನಾಡಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಹಾಗೂ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆಯಡಿ ಕೂಸಿನ ಮನೆ ನಡೆಯುತ್ತಿದ್ದು, ಇದನ್ನುಅರ್ಥಪೂರ್ಣವಾಗಿ ಮುನ್ನಡೆಸಿಕೊಂಡು ಹೋಗಬೇಕು. ಇದರಲ್ಲಿಆರೈಕೆದಾರರ ಪಾತ್ರ ಬಹಳದೊಡ್ಡದು,ಅವರೇಇದಕ್ಕೆಕಾರ್ಯಕರ್ತರುಇದ್ದಂತೆ.ಎಲ್ಲಾ ಮಕ್ಕಳನ್ನು ಕೂಸಿನ ಮನೆಗೆ ಬರುವಂತೆ ನೋಡಿಕೊಳ್ಳುವುದು.ಮಕ್ಕಳು ಬಂದಾಗಅವರನ್ನುಉತ್ತಮರೀತಿಯಲ್ಲಿಕಂಡು ನಲಿ-ಕಲಿ ರೀತಿಯಲ್ಲಿಚಟುವಟಿಕೆ ಹಮ್ಮಿಕೊಂಡು ನಿರಂತರ ಕೂಸಿನಮನೆ ನಡೆಸಬೇಕುಎಂದರು.
ಒಂದರಿಂದ ಮೂರು ವರ್ಷ ಮಕ್ಕಳು ಇಲ್ಲಿಆರೈಕೆ ಪಡೆಯಬಹುದು.ಮಕ್ಕಳ ಆರೈಕೆಗಾಗಿಯೇ ಈ ಕೂಸಿನ ಮನೆ ಮಾಡಿದ್ದು, ಯಾವುದೇತಾರತಮ್ಯ ಮಾಡದೇಜವಾಬ್ದಾರಿಯಿಂದ ನಿಭಾಯಿಸಬೇಕು.ಕೂಸಿನ ಮನೆಯಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಆರೈಕೆದಾರರು ಹಾಗೂ ಪಾಲಕರ ಪಾತ್ರವೂದೊಡ್ಡದು, ಈ ನಿಟ್ಟಿನಲ್ಲಿಐದು ದಿನಗಳವರೆಗೆ ಆರೈಕದಾರರಿಗೆತರಬೇತಿ ನೀಡುತ್ತಿದ್ದು. ಎಲ್ಲರೂಉತ್ತಮರೀತಿಯಲ್ಲಿತರಬೇತಿ ಪಡೆಯುವಂತೆ ತಿಳಿಸಿದರು. ತಾಲ್ಲೂಕು ಪಂಚಾಯಿತಿಯ ಸಹಾಯಕ ನಿರ್ದೇಶಕರಾದ (ಗ್ರಾ. ಉ) ರೂಪೇಶ್‌ಕುಮಾರ್‌ಅವರು ಮಾತನಾಡಿ, ಕೂಸಿನ ಮನೆ ನಿರ್ಮಿಸಲುಆಯ್ಕೆಯಾಗಿರುವಗ್ರಾಮದಲ್ಲಿನಅರ್ಹ ನರೇಗಾದಎಂಟುಜನ ಕೂಲಿ ಕಾರ್ಮಿಕರಿಗೆತರಬೇತಿ ನೀಡಲಾಗುತ್ತಿದೆ. ತರಬೇತಿ ಪಡೆದವರುಉತ್ತಮರೀತಿಯಲ್ಲಿ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆಯ ಮಾಸ್ಟರ್‌ಟ್ರೈನರ್ ಸಿಬ್ಬಂದಿ ಹಾಗೂ ಎಲ್ಲಾಕೇರ್ ಟೀಚರ್ಸ್‌ಗಳು ಭಾಗವಹಿಸಿದ್ದರು.