ಮದ್ದೂರು: ಮದ್ದೂರಿನಲ್ಲಿ ಒಬ್ಬ ವ್ಯಕ್ತಿಗೆ ಕೊರೊನಾ ಕಾಣಿಸಿಕೊಂಡಿದೆ ಎಂದು ಮಂಡ್ಯದಲ್ಲಿ ಡಿಹೆಚ್ ಒ ಡಾ.ಮೋಹನ್ ಮಾಹಿತಿ ನೀಡಿದ್ದಾರೆ.
75 ವರ್ಷದ ಮದ್ದೂರು ಮೂಲದ ವೃದ್ದ ಕೊರೊನಾ ಕಾಣಿಸಿಕೊಂಡಿದೆ.
ಮಂಡ್ಯ ಮೆಡಿಕಲ್ ಕಾಲೇಜಿಗೆ ಚಿಕಿತ್ಸೆಗಾಗಿ ವೃದ್ಧ ಬಂದಿದ್ದು, ಕೊರೊನಾ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಬಂದಿದ್ದ ಹಿನ್ನಲೆಯಲ್ಲಿ ಆತನಿಗೆ ಚಿಕಿತ್ಸೆ ನೀಡಿ ಇಂದು ಮನೆಗೆ ಕಳುಹಿಸಲಾಗಿದೆ.

ಆತನ ಸಂಪರ್ಕದಲ್ಲಿದ್ದ ಮನೆಯ ನಾಲ್ವರಿಗೂ ಪರೀಕ್ಷೆ ಮಾಡಲಾಗಿದ್ದು ಮನೆಯಲ್ಲೇ ಚಿಕಿತ್ಸೆ ನೀಡಲಾಗ್ತಿದೆ. ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ. ಜಿಲ್ಲಾಡಳಿತ ಕೊರೊನಾ ಎದುರಿಸಲು ಎಲ್ಲಾ ಸಿದ್ದತೆ ಮಾಡಿಕೊಂಡಿದೆ ಎಂದು ಹೇಳಿದ್ದಾರೆ.
ಸರ್ಕಾರ ಇಂದು ಗೈಡ್ ಲೈನ್ ಬಿಡುಗಡೆ ಮಾಡಲಿದೆ. ಅದರ ಅನುಸಾರ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ. ಆಕ್ಸಿಜನ್ ಪ್ಲಾಂಟ್ ರೆಡಿ ಮಾಡಿಕೊಂಡಿದ್ದೇವೆ, ಐಸಿಯು ಬೆಡ್ ವ್ಯವಸ್ಥೆ ಮಾಡಲಾಗಿದೆ. ಇಂದು ಸಭೆ ಇದೆ ಸಭೆಯಲ್ಲಿ ಗೈಡ್ ಲೈನ್ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದ ಅವರು ರೋಗ ಲಕ್ಷಣ ಇದ್ರೆ ಎಲ್ಲರೂ ಕೂಡ ಕೊವಿಡ್ ಟೆಸ್ಟ್ ಮಾಡಿಸಿ ಎಂದು ತಿಳಿಸಿದರು.