Sunday, April 20, 2025
Google search engine

Homeರಾಜ್ಯಸುದ್ದಿಜಾಲಬೆಳ್ಳಾಳೆ ಶಾಲೆಯಲ್ಲಿ ಗುರು-ಶಿಷ್ಯರ ಸಮಾಗಮ: ಹಳೆಯ ವಿದ್ಯಾರ್ಥಿಗಳಿಂದ ಅರ್ಥಪೂರ್ಣ ಗುರು ವಂದನೆ

ಬೆಳ್ಳಾಳೆ ಶಾಲೆಯಲ್ಲಿ ಗುರು-ಶಿಷ್ಯರ ಸಮಾಗಮ: ಹಳೆಯ ವಿದ್ಯಾರ್ಥಿಗಳಿಂದ ಅರ್ಥಪೂರ್ಣ ಗುರು ವಂದನೆ

ಪಾಂಡವಪುರ : ಅಧುನಿಕ ಜಗತ್ತಿನಲ್ಲಿ ಮರೆಯಾಗುತ್ತಿರುವ ಗುರು-ಶಿಷ್ಯರ ಸಂಬಂಧ, ತಂದೆ ತಾಯಿಯರನ್ನು ಪ್ರೀತಿಸುವ, ಪೋಷಿಸುವ, ಪ್ರವೃತ್ತಿಗಳನ್ನು ಇಂದಿನ ಯುವ ಜನತೆ ಕಾಪಾಡಿಕೊಂಡು ಹೋಗುವ ಮೂಲಕ ಭವಿಷ್ಯದ ಮಕ್ಕಳಿಗೆ ಮಾದರಿಯಾಗಬೇಕೆಂದು ಮಹಾಜನ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಆರ್.ತಿಮ್ಮೇಗೌಡ ಹೇಳಿದರು.

ತಾಲೂಕಿನ ಬೆಳ್ಳಾಳೆ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಆವರಣದಲ್ಲಿ ೧೯೮೬-೮೭ನೇ ಸಾಲಿನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ೩೬ ವರ್ಷಗಳ ನಂತರ ಗುರುಗಳನ್ನು ನೆನಪಿಟ್ಟುಕೊಂಡು ಅಭಿನಂದಿಸುತ್ತಿರುವುದು ಸಂತೋಷದ ವಿಷಯ ಎಂದರು. ಮುಂದಿನ ಪೀಳಿಗೆಯವರು ಈ ಪರಂಪರೆಯನ್ನು ಮುಂದುವರಿಸಿಕೊಂಡು ಗುರು ಶಿಷ್ಯರ ಬಾಂಧವ್ಯ ಚಿರವಾಗಿರಲಿ ಎಂದು ಅಭಿಪ್ರಾಯಪಟ್ಟರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ನಿವೃತ್ತ ಪ್ರಾಂಶುಪಾಲ ರಾಮಕೃಷ್ಣ, ೩೬ ವರ್ಷಗಳ ನಂತರ ನಮ್ಮೆಲ್ಲರನ್ನೂ ನೆನೆದು ಸನ್ಮಾನ ಮಾಡುತ್ತಿರುವುದು ನಮಗೆ ಪದ್ಮಭೂಷಣ ಪ್ರಶಸ್ತಿ ಬಂದಷ್ಟೇ ಖುಷಿಯಾಗುತ್ತಿದೆ ಎಂದರು.

ಸನ್ಮಾನ ಸ್ವೀಕರಿಸಿದ ಕೇಶವಪ್ಪ, ಕೆ.ಚಿಕ್ಕ ಪುಟ್ಟೇಗೌಡ, ಎಚ್.ಜವರೇಗೌಡ, ಕೆಂಪುಕೃಷ್ಣ ಹಾಗೂ ಬಿ.ಎನ್.ಜಯರಾಮ್ ಅವರು ತಮ್ಮ ಶಿಷ್ಯರು ನೀಡಿದ ಈ ಗೌರವ ವಂದನೆ ನಾವುಗಳು ಈ ಜನ್ಮದಲ್ಲಿ ಯಾವತ್ತೂ ಮರೆಯುವುದಿಲ್ಲ ಎಂದು ಸಂಭ್ರಮಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪ ಪ್ರಾಂಶುಪಾಲ ಎಲ್.ಎಸ್.ಕೇಶವಮೂರ್ತಿ ವಹಿಸಿದ್ದರು. ಹಿರಿಯ ಎಸ್ ಡಿಎಂಸಿ ಅಧ್ಯಕ್ಷ ಬಿ.ಕೆ ಕೃಷ್ಣಪ್ಪ, ಹಿರಿಯ ವಿದ್ಯಾರ್ಥಿಗಳಾದ ಎಂ.ಎಲ್.ಶ್ವೇತಾಚಲ, ಪುಟ್ಟೇಗೌಡ, ಎಂ.ಎಸ್. ಸೋಮೇಗೌಡ, ಎನ್.ಡಿ.ಸಿದ್ದಪ್ಪ, ಬೆಟ್ಟಸ್ವಾಮಿ,
ಜೆ.ಬಾಲಕೃಷ್ಣೇಗೌಡ, ಡಿ.ದೇವರಾಜು, ಎಚ್.ಜೆ.ಮಂಜುನಾಥ್, ರಾಮಲಿಂಗೇಗೌಡ, ಬಿ.ಎಸ್.ವಿಜಯ, ಸಿ.ನಾಗಮಣಿ, ಮಂಗಳಗೌರಿ, ಲಲಿತ, ಸುಧಾಮಣಿ, ಪ್ರೇಮ, ಭಾಗ್ಯ, ಪುಷ್ಪ, ನಾಗರತ್ನ, ಸಿ.ಸಿ.ಶಿವಶಂಕರ, ಎಂ.ಸಿ.ಮಹದೇವು, ದೊಳ್ಳೆಗೌಡ, ಪುಟ್ಟರಾಜು, ಸುರೇಶ್, ಪಿ.ಸುರೇಶ್, ಎಚ್.ವಿ.ಕುಮಾರ್, ವಿಜೇಂದ್ರ, ಚಂದ್ರಾಚಾರಿ,ನಿಂಗೇಗೌಡ, ನರಸಿಂಹೇಗೌಡ, ಕುಮಾರ್, ಸ್ವಾಮಿ, ಶಿವರುದ್ರಪ್ಪ, ಜಯರಾಮ, ಶಾಲೆಯ ಶಿಕ್ಷಕರು, ಎಸ್ ಡಿಎಂಸಿ ಅಧ್ಯಕ್ಷರು, ಸದಸ್ಯರು, ಪೋಷಕರು ಹಾಗೂ ಶಾಲಾ ಮಕ್ಕಳು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular