Sunday, April 20, 2025
Google search engine

Homeರಾಜ್ಯಸುದ್ದಿಜಾಲವಿದ್ಯುತ್ ಸುರಕ್ಷತಾ ಜಾಗೃತಿ ಜಾಥಾಕ್ಕೆ ಚಾಲನೆ : ಬೆಸ್ಕಾಂ ಸಿಬ್ಬಂದಿಯಿಂದ ಜಾಗೃತಿ

ವಿದ್ಯುತ್ ಸುರಕ್ಷತಾ ಜಾಗೃತಿ ಜಾಥಾಕ್ಕೆ ಚಾಲನೆ : ಬೆಸ್ಕಾಂ ಸಿಬ್ಬಂದಿಯಿಂದ ಜಾಗೃತಿ

ಚಿತ್ರದುರ್ಗ: ವಿದ್ಯುತ್ ಅಪಘಾತ ತಡೆ ಸಪ್ತಾಹದ ಅಂಗವಾಗಿ ಬೆಸ್ಕಾಂ ಚಿತ್ರದುರ್ಗ ವಿಭಾಗದಿಂದ ಮಂಗಳವಾರ ವಿದ್ಯುತ್ ಸುರಕ್ಷಣಾ ಜಾಗೃತಿ ಜಾಥಾವನ್ನು ಚಿತ್ರದುರ್ಗ ನಗರದಲ್ಲಿ ನಡೆಸಲಾಯಿತು. ನಗರದ ಹೊಳಲ್ಕೆರೆ ರಸ್ತೆಯ ಕನಕ ಸರ್ಕಲ್ ಬಳಿ ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯುರ್ ಡಿ.ಜಯಣ್ಣ ವಿದ್ಯುತ್ ಸುರಕ್ಷಣಾ ಜನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಡಿ.ಜಯಣ್ಣ, ಸಾರ್ವಜನಿಕರು, ರೈತರು, ಶಾಲಾ ಮಕ್ಕಳು ಹಾಗೂ ಬೆಸ್ಕಾಂ ಸಿಬ್ಬಂದಿಗೆ ವಿದ್ಯುತ್ ಅಪಘಾತ ತಡೆಯುವ ಸಲುವಾಗಿ ಅರಿವು ಮೂಡಿಸಲು ಜಾಥಾ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ವಿದ್ಯುತ್ ಅಪಘಾತ ಉಂಟಾಗದಂತೆ ಹೇಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬೆಸ್ಕಾಂ ಮುಂದಾಗಿದೆ. ಅಪಘಾತಗಳನ್ನು ತಡೆಗಟ್ಟುವ ಸಲುವಾಗಿ ಸುರಕ್ಷಣಾ ಜಾಥಾ ನಡೆಸಿ ಜನರಲ್ಲಿ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು. ವಿದ್ಯುತ್ ಅಪಘಾತ ಹಾಗೂ ತುರ್ತು ಸಂದರ್ಭದಲ್ಲಿ ದೂರವಾಣಿ ಸಂಖ್ಯೆ 1912 ಕರೆ ಮಾಡಿ ಮಾಹಿತಿ ನೀಡಬಹುದು. ಚಿತ್ರದುರ್ಗ ವಿಭಾಗದ ವ್ಯಾಪ್ತಿಯಲ್ಲಿನ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಚಿತ್ರಕಲೆ, ಪ್ರಬಂಧ, ಚರ್ಚಾ ಸ್ಪರ್ಧೆಗಳನ್ನು ಆಯೋಜಿಸಿ ವಿದ್ಯುತ್ ಅಪಘಾತಗಳ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ವಿದ್ಯುತ್ ಅಪಘಾತ ತಡೆಯುವ ಸಲುವಾಗಿ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ನಂತರ ಬೆಸ್ಕಾಂ ಸಿಬ್ಬಂದಿಗೆ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ನಗರದ ಹೊಳಲ್ಕೆರೆ ರಸ್ತೆಯ ಕನಕ ಸರ್ಕಲ್‍ನಿಂದ ಆರಂಭವಾದ ಜನ ಜಾಗೃತಿ ಜಾಥಾವು, ಗಾಂಧಿ ಸರ್ಕಲ್, ತಾಲ್ಲೂಕು ಕಚೇರಿ, ಜೆ.ಸಿ.ಆರ್ ಬಡಾವಣೆ ಮುಖಾಂತರ ಆರ್.ಟಿ.ಓ ಕಚೇರಿ ಬಳಿಯ ಕೆಇಬಿ ಸಮುದಾಯ ಭವನ ತಲುಪಿತು. ವಿದ್ಯುತ್ ಸುರಕ್ಷಣಾ ಜನ ಜಾಗೃತಿ ಜಾಥಾದಲ್ಲಿ ಚಿತ್ರದುರ್ಗ ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿಯರ್‍ಗಳಾದ ಮೇಘರಾಜ್, ಶಿವಕುಮಾರ್, ಉಪ ಮುಖ್ಯ ವಿದ್ಯುತ್ ಪರಿವೀಕ್ಷಕರಾದ ಜೆ.ಹೆಚ್.ಶ್ರೀನಿವಾಸ್, ಎಇಇಗಳಾದ ನಾಗರಾಜು, ಜಯಣ್ಣ, ಬೆಸ್ಕಾಂ ನೌಕರರ ಸಂಘದ ಉಪಾಧ್ಯಕ್ಷ ಕೆ.ಪಿ.ಬಸವರಾಜು, ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಮಹಾಂತೇಶ್, ಕಲ್ಯಾಣ ಸಂಸ್ಥೆ ಸಂಘಟನಾ ಕಾರ್ಯದರ್ಶಿ ಜೆ.ರಮೇಶ್ ಹಾಗೂ ಬೆಸ್ಕಾಂ ಸಿಬ್ಬಂದಿ, ಪವರ್ ಮೆನ್‍ಗಳು ಇದ್ದರು.

RELATED ARTICLES
- Advertisment -
Google search engine

Most Popular