ಮಂಡ್ಯ: ಲೋಕಸಭೆ ಜೊತೆಗೆ, ಶಾಸಕ, ಜಿಪಂ, ತಾಪಂ, ಗ್ರಾಪಂ, ಚುನಾವಣೆಗೂ ಜೆಡಿಎಸ್-ಬಿಜೆಪಿ ಹೊಂದಾಣಿಕೆ ಮಾಡಿಕೊಳ್ಳಲಿ. ಇಲ್ಲದಿದ್ದರೆ ಬಿಜೆಪಿ-ಜೆಡಿಎಸ್ ಗೆ ಉಳಿಗಾಲವಿಲ್ಲ ಎಂದು ಬಿಜೆಪಿ-ಜೆಡಿಎಸ್’ಗೆ ಮಂಡ್ಯದ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಎಚ್ಚರಿಕೆ ಕೊಟ್ಟಿದ್ದಾರೆ.
ಎಂ ಪಿ ಚುನಾವಣೆಯಲ್ಲಿ ನನಗೆ ಕೇವಲ 6 ತಿಂಗಳು ಮಾತ್ರ ಎಂಪಿ ಮಾಡಿದ್ದರು. ಬಳಿಕ ಮಗನಿಗೆ ಟಿಕೇಟ್ ನೀಡಿ ನನ್ನನ್ನು ದೊಡ್ಡ ಸಾಲಗಾರನಾಗಿ ಮಾಡಿದ್ರು. ನಾನೇನು ತಪ್ಪು ಮಾಡಿರಲಿಲ್ಲ ಆದರೂ ಪಕ್ಷದಿಂದ ಕಿತ್ತು ಹಾಕಿದರು. ಈಗಲಾದರೂ ದೊಡ್ಡ ಮನಸ್ಸು ಮಾಡಿ ಶಿವರಾಮೇಗೌಡರಿಗೆ ಅನ್ಯಾಯ ಮಾಡಿಲ್ಲ ಅಂದ್ರೆ ನನ್ನೇ ಅಭ್ಯರ್ಥಿ ಮಾಡಲಿ ಎಂದು ಹೇಳಿದರು.
ಅವರೇ ಈಗ ತೀರ್ಮಾನ ತಗೊಂಡು ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡಲಿ. ಬಿಜೆಪಿ-ಜೆಡಿಎಸ್ ಹೊಂದಾಣಿಕೆಯನ್ನ ಲೋಕಸಭೆಗೆ ಸೀಮಿತ ಮಾಡಬೇಡಿ ಎಂದು ಬಿಜೆಪಿ ಹೈಕಾಮಂಡ್ ಹಾಗೂ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಒತ್ತಾಯ ಮಾಡುತ್ತೇನೆ ಎಂದರು.
ಬಿಜೆಪಿಯಲ್ಲಿ ಬೆಳೆಯೋದಕ್ಕೆ ಅವಕಾಶ ಇಲ್ಲ. ಈಗಲೇ ಶಾಸಕ, ಜಿ.ಪಂ, ತಾ.ಪಂ, ಗ್ರಾ.ಪಂ. ಚುನಾವಣೆಗೂ ಒಂದಾಣಿಕೆ ಮಾಡ್ಕೊಳ್ಳಿ. ಇದರಿಂದ ಬಿಜೆಪಿ-ಜೆಡಿಎಸ್ ಇಬ್ಬರಿಗೂ ಉತ್ತಮ ಎಂದು ಹೇಳಿದರು.