ಧಾರವಾಡ : ರಾಜ್ಯ ಚುನಾವಣಾ ಆಯೋಗವು ಕಲಘಟಗಿ ಪಟ್ಟಣ ಪಂಚಾಯತಿಯ ವಾರ್ಡ್ ನಂ: 01 ಹಾಗೂ ನವಲಗುಂದ ಪುರಸಭೆಯ ವಾರ್ಡ್ ನಂ: 23ರ ಸದಸ್ಯ ಸ್ಥಾನಗಳಿಗೆ ಉಪ ಚುನವಣೆಯು ಡಿಸೆಂಬರ್ 27 ರಂದು ಜರುಗಲಿದೆ. ಡಿಸೆಂಬರ್ 08 ರಿಂದ 30 ರ ವರೆಗೆ ಸದಾಚಾರ ನೀತಿ ಸಂಹಿತೆ ಜಾರಿಯಲಿದೆ. ಚುನಾವಣೆಯನ್ನು ಶಾಂತಿಯುತವಾಗಿ ಹಾಗೂ ಸುಗಮವಾಗಿ ನಡೆಸಲು ಕ್ರಮವನ್ನು ಜಾರಿಗೊಳಿಸಲಾಗಿದೆ.
ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣ ಪಂಚಾಯತಿಯ ವಾರ್ಡ್ ನಂ: 01 ಹಾಗೂ ನವಲಗುಂದ ಪುರಸಭೆಯ ವಾರ್ಡ್ ನಂ: 23ರ ಸದಸ್ಯ ಸ್ಥಾನಗಳಿಗೆ ಡಿಸೆಂಬರ್ 27 ರಂದು ಉಪ ಚುನವಣೆಯು ಮುಕ್ತವಾಗಿ ಹಾಗೂ ಶಾಂತಿಯುತವಾಗಿ ಜರುಗುವ ಹಿತದೃಷ್ಟಿಯಿಂದ ಕಲಘಟಗಿ ಮತ್ತು ನವಲಗುಂದ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ನಡೆಯುವ ಸಂತೆ, ಜಾತ್ರೆ, ಉತ್ಸವ ಮುಂತಾದವುಗಳನ್ನು ನಿಷೇಧಿಸಿ ಜಿಲ್ಲಾದಂಡಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಆದೇಶ ಹೊರಡಿಸಿದ್ದಾರೆ.