ಮನವಿ ಮಾಡಿದ ಗ್ರಾಮ ಪಂಚಾಯಿತಿ ಸದಸ್ಯರ ಮಾತಿಗೆ ಕ್ಯಾರೆ ಎನ್ನದ ಮೈಸೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಾಯತ್ರಿ
ಎಡತೂರೆ ಮಹೇಶ್
ಎಚ್ ಡಿ ಕೋಟೆ: ಎಚ್ ಡಿ ಕೋಟೆ ತಾಲೂಕು ಅಣ್ಣೂರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ಜಿಲ್ಲಾ ಪಂಚಾಯತ್ ಕಾರ್ಯನಿರ್ವಣಧಿಕಾರಿ ಗಾಯತ್ರಿ ರವರು ಗ್ರಾಮ ಪಂಚಾಯಿತಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದರು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರು ಪಂಚಾಯಿತಿಗೆ ಧಾವಿಸಿದ್ದಾರೆ . ಪಂಚಾಯಿತಿಯ ಒಳಗಡೆ ಕುಳಿತಿದ್ದ ಮೇಡಂ ರವರಿಗೆ ನಮಸ್ಕಾರ ಮೇಡಂ ಎಂದರು ಕೂಡ ಸೌಜನ್ಯ ಕಾದರೂ ಮಾತನಾಡಿಸದೆ ಕಂಡರೂ ಕಾಣದಂತೆ ತಮ್ಮ ಪಾಡಿಗೆ ಕುಳಿತಿದ್ದರು. ಆದರೂ ಸಹ ಸದಸ್ಯರು ಮೇಡಂ ರವರಿಗೆ ಅಣ್ಣೂರು ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ಹೋಗಿವೆ.
ಸುಮಾರು ಒಂದುವರೆ ವರ್ಷದಿಂದ ಕೆಟ್ಟು ನಿಂತಿದ್ದು ಹಲವಾರು ಬಾರಿ ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದರು ಏನು ಪ್ರಯೋಜನವಾಗಿಲ್ಲ, ದಯಮಾಡಿ ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೇವೆ ಜನರಿಗೆ ಕುಡಿಯಲು ಶುದ್ಧ ನೀರು ಕೊಡುವ ಜವಾಬ್ದಾರಿ ನಮ್ಮ ಮೇಲೆ ಇದೆ ಆದರೆ ಈ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ ಜೊತೆಗೆ ಈ ಘಟಕಗಳನ್ನು ಗ್ರಾಮ ಪಂಚಾಯಿತಿಗಳಿಗೆ ಜವಾಬ್ದಾರಿ ನೀಡಿಲ್ಲ. ಜಿಲ್ಲಾ ಪಂಚಾಯತಿ ಅವರೇ ನಿರ್ವಹಣೆ ಮಾಡುತ್ತಿದ್ದಾರೆ. ಜಿಲ್ಲಾ ಪಂಚಾಯಿತಿಯಲ್ಲಿ ಕೇಳಿದರೆ ಗುತ್ತಿಗೆದಾರರ ಮೇಲೆ ಹೇಳುತ್ತಾರೆ.
ಗುತ್ತಿಗೆದಾರರಿಗೆ ಕರೆ ಮಾಡಿ ಕೇಳಿದರೆ ಇದು ನಮ್ಮ ಜವಾಬ್ದಾರಿ ಅಲ್ಲ ಎನ್ನುತ್ತಾರೆ ಗ್ರಾಮದ ಗ್ರಾಮಸ್ಥರುಗಳು ನಮಗೆ ದಿನನಿತ್ಯ ರಿಪೇರಿ ಪಡಿಸುವಂತೆ ಕೇಳುತ್ತಾರೆ, ನಾವು ಗ್ರಾಮಗಳಲ್ಲಿ ಓಡಾಡಲು ಆಗುತ್ತಿಲ್ಲ ಹೀಗಿರುವಾಗ ನಾವು ಯಾರನ್ನು ಕೇಳಬೇಕು ಎಂದು ಅಲ್ಲೇ ಇದ್ದ ಜಿಲ್ಲಾ ಪಂಚಾಯತ್ ವಾಟರ್ ಸಪ್ಲೈ ಇಂಜಿನಿಯರ್ ಗೋವಿಂದ ನಾಯಕರನ್ನು ಕೇಳುತ್ತಿದ್ದ ಸಂದರ್ಭದಲ್ಲಿ ಶ್ರೀಮತಿ ಗಾಯತ್ರಿ ಅವರು ಮಧ್ಯಪ್ರವೇಶಿಸಿ ನಿಮಗೆ ಎಷ್ಟು ಸಾರಿ ಹೇಳಬೇಕು ನಮ್ಮಲ್ಲಿ ಹಣ ಇಲ್ಲ ದುರಸ್ತಿ ಮಾಡಲು ಸಾಧ್ಯವಿಲ್ಲ ಪದೇ ಪದೇ ವಿಚಾರವನ್ನು ಪ್ರಸ್ತಾಪಿಸಬೇಡಿ ಎಂದು ಏರು ಧ್ವನಿಯಲ್ಲಿ ಕೂಗಾಡುತ್ತಾ ಹೊರ ನಡೆದಿದ್ದಾರೆ.

ಇದರಿಂದ ಬೇಸತ್ತ ಗ್ರಾಮ ಪಂಚಾಯತಿ ಸದಸ್ಯರು ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಗ್ರಾಮೀಣ ಅಭಿವೃದ್ಧಿ ಸಚಿವರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ ಮೇಡಂರವರು ನಡೆದುಕೊಂಡ ಕಾರ್ಯವೈಖರಿ ಬಗ್ಗೆ ದೂರು ನೀಡುವದಾಗಿ ಹಾಗೂ ಕುಡಿಯಲು ನೀರು ಕೇಳಿದರೆ ಕೊಡಲಾಗದ ಇಂಥ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು. ಸಾರ್ವಜನಿಕರಿಗೆ ಮತ್ತು ಚುನಾಯಿತ ಪ್ರತಿನಿಧಿಗಳು ಕೈಮುಗಿದುಬೇಡಿಕೊಂಡರು ಕ್ಯಾರೆ ಎನ್ನದ ಇಂಥ ಅಧಿಕಾರಿಗಳು ನಮಗೆ ಬೇಡ ಜಿಲ್ಲೆಯಿಂದ ವರ್ಗಾವಣೆ ಮಾಡುವಂತೆ ಮತ್ತು ಜನರಿಗೆ ಸ್ಪಂದಿಸುವ ಅಧಿಕಾರಿಗಳನ್ನು ನೇಮಿಸಬೇಕು ಎಂದು ಸರ್ಕಾರ ವನ್ನು ಒತ್ತಾಯಿಸಲಾಗುವುದು ಎಂದು ಗ್ರಾಮ ಪಂಚಾಯಿತಿಯ ಸದಸ್ಯ ಮಹೇಶ್ ಆಗ್ರಹಿಸಿದ್ದಾರೆ. ಒಂದು ವೇಳೆ ಇವರನ್ನು ವರ್ಗಾವಣೆ ಮಾಡಬೇಕು ಇಂಥ ಅಧಿಕಾರಿ ನಮಗೆ ಬೇಡ ,ಇವರನ್ನು ವರ್ಗಾವಣೆ ಮಾಡದಿದ್ದರೆ ಮೈಸೂರು ಜಿಲ್ಲಾ ಪಂಚಾಯಿತಿಯ ಕಚೇರಿಯ ಮುಂದೆ ಅನಿದಿಷ್ಟಕಾಲ ಉಪವಾಸ ಸತ್ಯಾಗ್ರಹ ಮಾಡುವುದಾಗಿ ತಿಳಿಸಿದ್ದಾರೆ.
