ಬೆಂಗಳೂರು: ಸೈಬರ್ ವಂಚಕರು ನಟಿ ಹಾಗೂ ರಾಜಕಾರಣಿ ತಾರಾ ಅನುರಾಧ ಅವರ ಫೇಸ್‌ಬುಕ್ ಖಾತೆ ಹ್ಯಾಕ್ ಮಾಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ನಟಿ ತಾರಾ ದಕ್ಷಿಣ ವಿಭಾಗದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಫೇಸ್ಬುಕ್ ನಲ್ಲಿ ತಾರಾ ಅನುರಾಧ ಮತ್ತು ತಾರಾ ಅನುರಾಧ ವೇಣು ಹೆಸರಿನ ಎರಡು ಅಧಿಕೃತ ಖಾತೆಗಳಿದ್ದು, ತಾರಾ ಅನುರಾಧ ವೇಣು ಹೆಸರಿನ ಖಾತೆಯನ್ನು ಅವರು ಹೆಚ್ಚಾಗಿ ಬಳಸುತ್ತಿದ್ದಾರೆ. ತಾರಾ ಅನುರಾಧ ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಬಂದ ಬಗ್ಗೆ ಪರಿಚಿತರೊಬ್ಬರು ತಿಳಿಸಿದ್ದಾರೆ. ತಮಗೆ ಸಂಬಂಧವಿಲ್ಲದ ಪೋಸ್ಟ್ ಹಾಕಲಾಗಿದೆ. ಅಪರಿಚಿತರು ಖಾತೆ ಹ್ಯಾಕ್ ಮಾಡಿ ಪೋಸ್ಟ್ ಹಾಕಿದ್ದು, ಇದನ್ನು ಡಿಲೀಟ್ ಮಾಡಿಸಿ ಕೃತ್ಯ ಎಸಗಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.