ಮೈಸೂರು: ವಿಶ್ವಸಂಕೇತಿ ಭಾರತಿ ಟ್ರಸ್ಟ್‌ನಿಂದ ಡಿ.೨೩, ೨೪ ರಂದು ಸಂಕೇತಿ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಸಮ್ಮೇಳನದ ಕಾರ್ಯಾಧ್ಯಕ್ಷ ಎಂ.ಬಿ.ಭಾನುಪ್ರಕಾಶ ಹೇಳಿದರು.
ಇಂದು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರು ಮಾತನಾಡಿದರು ಸಮ್ಮೇಳನದ ಅಧ್ಯಕ್ಷರಾಗಿ ಡಾ.ಕೆ.ಅನಂತರಾಂ ಇರಲಿದ್ದು, ಸಾಹಿತಿ ಎಸ್.ಎಲ್.ಬೈರಪ್ಪ ಅವರು ಸಮ್ಮೇಳನ ಉದ್ಘಾಟಿಸುವರು. ಶ್ರೀ ನಾಚಾರಮ್ಮನವರ ಕುರಿತ ನೃತ್ಯ ರೂಪಕ, ವಿಚಾರಗೋಷ್ಠಿ, ಪುಸ್ತಕ ಪ್ರದರ್ಶನ ಜಯನಗರದ ನಾಚಾರಮ್ಮ ಭವನದಲ್ಲಿ ಜರುಗಲಿವೆ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಶಾಸಕ ಶ್ರೀವತ್ಸ, ಕೌಶಿಕ ಸಂಕೇತಿ ಸಂಘದ ಎಚ್.ಎಸ್.ಅನಂತ ಪದ್ಮನಾಭ ಸೇರಿ ಅನೇಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ಗೌರವಾಧ್ಯಕ್ಷರು ಆದ ಶಾಸಕ ಶ್ರೀವತ್ಸ, ಸಂಚಾಲಕರಾದ ಸಂಸ್ಕೃತಿ ಸುಬ್ರಹ್ಮಣ್ಯ, ಸರೋಜಾ ಹಿರಿಯಣ್ಣ ಮತ್ತಿತರರು ಇದ್ದರು.