ಮೈಸೂರು: ಕುವೆಂಪುರವರ ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ನಾಗರಿಕ ವೇದಿಕೆಯ ಪೂರ್ಣಪ್ರಜ್ಞಾ ವಿದ್ಯಾ ಕೇಂದ್ರ ಶಾಲೆಯ 2 ನೇ ತರಗತಿ ವಿದ್ಯಾರ್ಥಿ ಶೆರ್ವಿನ್ ವಿ 6ನೇ ಓಪನ್ ನ್ಯಾಷನಲ್ ಲೆವೆಲ್ ಕರಾಟೆ ಸ್ಪರ್ಧೆಯಲ್ಲಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಹಾಗೂ 7 ತರಗತಿ ವಿದ್ಯಾರ್ಥಿ ಚಿರಾಗ್ ಜಿ, ಮತ್ತು ವರುಣ್ ರಾಜ್ S ಜಿಲ್ಲಾಮಟ್ಟದ ಬ್ಯಾಸ್ಕೆಟ್ ಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಿ 2ನೇ ಬಹುಮಾನಗಳಿಸಿ, ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಇವರಿಗೆ ನಾಗರಿಕ ವೇದಿಕೆ ವತಿಯಿಂದ ಶಾಲಾ ಆವರಣದಲ್ಲಿ ಸನ್ಮಾನಿಸಲಾಯಿತು.
ವೇದಿಕೆ ಗೌರವ ಅಧ್ಯಕ್ಷರಾದ B P ಪುಟ್ಟಸ್ವಾಮಿ,ಅಧ್ಯಕ್ಷರಾದ ಶ್ರೀರಂಗಯ್ಯ, ಉಪಾಧ್ಯಕ್ಷ ಎಚ್ ಅರವಿಂದ್, ಕಾರ್ಯದರ್ಶಿ ಕುಳ್ಳೇಗೌಡ, ಶಾಲಾ ಸಮಿತಿ ಅಧ್ಯಕ್ಷರಾದ ಜೆ ಲೋಕೇಶ್, ಸದಸ್ಯರುಗಳಾದ ಎಸ್ ಕೃಷ್ಣ, ಶೈಲೇಂದ್ರ, ರಮೇಶ್ S M, ಬಿ ಶಿವಣ್ಣ, ರೇವಣ್ಣರಾಜ್, ಪಿ ರಮೇಶ್, ಶ್ರೀಕಾಂತ್, ಅಪ್ಪಾಜಿ ಗೌಡ ಹಾಗೂ ಲಕ್ಷ್ಮಿ ಗೌಡ ಮುಂತಾದವರು ಉಪಸ್ಥಿತರಿದ್ದರು.