Monday, April 21, 2025
Google search engine

HomeUncategorizedರಾಷ್ಟ್ರೀಯಪೂಂಛ್ ನಲ್ಲಿ ಸೇನಾ ವಾಹನಗಳ ಮೇಲೆ ಗುಂಡಿನ ದಾಳಿ: ಐವರು ಯೋಧರು ಹುತಾತ್ಮ

ಪೂಂಛ್ ನಲ್ಲಿ ಸೇನಾ ವಾಹನಗಳ ಮೇಲೆ ಗುಂಡಿನ ದಾಳಿ: ಐವರು ಯೋಧರು ಹುತಾತ್ಮ

ಶ್ರೀನಗರ: ಗುರುವಾರ ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಭಾರೀ ಶಸ್ತ್ರಸಜ್ಜಿತ ಭಯೋತ್ಪಾದಕರು ಎರಡು ಸೇನಾ ವಾಹನಗಳ ಮೇಲೆ ನಡೆಸಿದ ಗುಂಡಿನ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಗಾಯಗೊಂಡ ಯೋಧರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪೂಂಛ್ ನಲ್ಲಿ ಅಡಗಿರುವ ಉಗ್ರರನ್ನು ಸೆದೆಬಡಿಯಲು ಸೇನೆಯು ಪೂಂಛ್ ಪ್ರದೇಶವನ್ನು ಸುತ್ತುವರಿದಿದೆ. ದಾಳಿಯ ಹೊಣೆಯನ್ನು ಲಷ್ಕರ್-ಎ-ತೊಯ್ಬಾದ ಪಾಕಿಸ್ತಾನ ಮೂಲದ ಘಟಕವಾದ ಪೀಪಲ್ಸ್ ಆಂಟಿ-ಫ್ಯಾಸಿಸ್ಟ್ ಫ್ರಂಟ್ (ಪಿಎಎಫ್‌ ಎಫ್) ಹೊಂಚುದಾಳಿಯ ಹೊಣೆ ಹೊತ್ತುಕೊಂಡಿದೆ.

ಉಗ್ರರ ದಮನಕ್ಕೆ ಸೇನೆಯು ಬುಧವಾರ ರಾತ್ರಿಯಿಂದ ಡಿಕೆಜಿ ಪ್ರದೇಶ ಎಂದು ಕರೆಯಲ್ಪಡುವ ಡೇರಾ ಕಿ ಗಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ನಿನ್ನೆ ಮಧ್ಯಾಹ್ನ 3.45ಕ್ಕೆ ರಾಜೌರಿಯ ಪೂಂಚ್ ಪ್ರದೇಶದಲ್ಲಿ ಡೇರಾ ಕಿ ಗಲಿ ಮೂಲಕ ಸಾಗುತ್ತಿದ್ದ ಎರಡು ಸೇನಾ ವಾಹನಗಳ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ ನಂತರ ಎನ್‌ಕೌಂಟರ್ ಆರಂಭವಾಗಿದೆ.

ಭಯೋತ್ಪಾದಕರು ಈ ಪ್ರದೇಶದಲ್ಲಿ ರಸ್ತೆಗಳು ಹದಗೆಟ್ಟಿದ್ದು, ವಾಹನಗಳು ಈ ಪ್ರದೇಶದಲ್ಲಿ ನಿಧಾನವಾಗಿ ಸಂಚರಿಸುವ ಕಾರಣ ಮೊದಲೇ ಸಜ್ಜಾಗಿದ್ದ ಭಯೋತ್ಪಾದಕರು ಈ ಪ್ರದೇಶದಲ್ಲಿ ನೆಲೆಯೂರಿದ್ದರು ವಾಹನ ಬರುತ್ತಲೇ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಸೇನಾ ಮುಖ್ಯ ಅಧಿಕಾರಿ ಹೇಳಿದ್ದಾರೆ.

ಸದ್ಯ ಘಟನಾ ಪ್ರದೇಶವನ್ನು ಸೇನೆ ಸುತ್ತುವರೆದಿದ್ದು ಭಯೋತ್ಪಾದಕರು ನಿರ್ನಾಮಕ್ಕೆ ಹೆಚ್ಚಿನ ಸೇನಾ ಬಲ ನಿಯೋಜಿಸಲಾಗಿದ್ದು ಕಾರ್ಯಾಚರಣೆ ಮುಂದುವರೆದಿದೆ ಎನ್ನಲಾಗಿದೆ.

RELATED ARTICLES
- Advertisment -
Google search engine

Most Popular