ರಾಮನಗರ: ಕಳೆದ ರಾತ್ರಿ ಕಬ್ಬಾಳು ಗ್ರಾಮದಲ್ಲಿ ಬರೋಬ್ಬರಿ 12 ಕಾಡಾನೆಗಳು ನುಗ್ಗಿ ಆತಂಕ ಮೂಡಿಸಿದೆ.
ಕನಕಪುರ ತಾಲೂಕಿನ ಹೊಸ ಕಬ್ಬಾಳು ಗ್ರಾಮದಲ್ಲಿ ಕಾಡಾನೆಗಳು ಪ್ರತ್ಯಕ್ಷವಾಗಿದ್ದು, ಜನವಸತಿ ಪ್ರದೇಶದಲ್ಲೇ ತಡರಾತ್ರಿ ಓಡಾಡಿವೆ. ಸದ್ಯ ಕಂಚುಗಾರನಹಳ್ಳಿ ಬಳಿ ಕಾಡಾನೆಗಳು ಬೀಡುಬಿಟ್ಟಿವೆ.
ಕಳೆದ ಭಾನುವಾರ ಒಂಟಿ ಸಲಗವೊಂದು ರೈತನನ್ನು ಬಲಿಪಡೆದಿತ್ತು. ಇದೀಗ ಕಾಡಾನೆಗಳು ಹಿಂಡು ಕಂಡ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಅರಣ್ಯಾಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.