ಹೊಸದಿಲ್ಲಿ: ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ವಾಣಿಜ್ಯ ಎಲ್ ಪಿಜಿ ಬೆಲೆಯಲ್ಲಿ ಪರಿಷ್ಕರಣೆ ಮಾಡಿ ಶುಕ್ರವಾರ ಪ್ರಕಟಿಸಿವೆ.
19 ಕೆ.ಜಿ ವಾಣಿಜ್ಯ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಗಳ ಬೆಲೆಯನ್ನು 39.50 ರೂಪಾಯಿಗಳಷ್ಟು ಕಡಿಮೆ ಮಾಡಲಾಗಿದೆ. ಹೊಸ ದರಗಳು ಇಂದಿನಿಂದ (22 ಡಿಸೆಂಬರ್) ಜಾರಿಗೆ ಬರುತ್ತವೆ.
ಬೆಲೆ ಇಳಿಕೆಯ ನಂತರ, ದೆಹಲಿಯಲ್ಲಿ 19 ಕೆಜಿಯ ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ನ ಚಿಲ್ಲರೆ ಮಾರಾಟದ ಬೆಲೆ ಈಗ 1757.50 ರೂ. ಇದೆ.
19 ಕೆಜಿಯ ವಾಣಿಜ್ಯ ಸಿಲಿಂಡರ್ ಈಗ ದೆಹಲಿಯಲ್ಲಿ ರೂ 1757.50, ಕೋಲ್ಕತ್ತಾದಲ್ಲಿ ರೂ 1868.50, ಮುಂಬೈನಲ್ಲಿ ರೂ 1710 ಮತ್ತು ಚೆನ್ನೈನಲ್ಲಿ ರೂ 1929 ಕ್ಕೆ ಲಭ್ಯವಿರುತ್ತದೆ.