ಮಂಗಳೂರು(ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಅಜಿಲಮೊಗರು ಜುಮ್ಮಾ ಮಸೀದಿಯ ಸಂಸ್ಥಾಪಕ ಹಝ್ರತ್ ಸಯ್ಯಿದ್ ಬಾಬಾ ಫಕ್ರುದ್ದೀನ್ ಸ್ಮರಣಾರ್ಥ ನಡೆಯುವ 751ನೇ ಮಾಲಿದಾ ಉರುಸ್ ಡಿ. 25ರಿಂದ 29ರವರೆಗೆ ನಡೆಯಲಿದೆ ಎಂದು ಮಸೀದಿಯ ಸಾವಿರ ಜಮಾತ್‌ನ ಅಧ್ಯಕ್ಷ ಪಿ.ಬಿ. ಅಬ್ದುಲ್ ಹಮೀದ್ ಹೇಳಿದರು.
ಅವರು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.

‘ಮಾಲಿದಾ ಉರುಸ್ ಹಿಂದೂ– ಮುಸ್ಲಿಂ ಸೌಹಾರ್ದದ ಸಂಕೇತವಾಗಿದೆ. ಈ ಕಾರ್ಯಕ್ರಮದಲ್ಲಿ ಮುಸ್ಲಿಮರು ಮಾತ್ರವಲ್ಲ, ಸರ್ವ ಧರ್ಮೀಯರು ಭಾಗವಹಿಸುತ್ತಾರೆ. ಡಿ. 25ರಂದು ಮಗ್ರಿಬ್ ನಮಾಜ್ ನಂತರ ಅಸ್ಸಯ್ಯಿದ್ ಜಾಫರ್ ಸ್ವಾದಿಕ್ ತಂಙಳ್ ಕುಂಬೋಳ್ ನೇತೃತ್ವದಲ್ಲಿ ಜಲಾಲಿಯ್ಯ ರಾತೀಬ್ ನಡೆಯಲಿದೆ’ ಎಂದರು.
ಸುದ್ದಿಗೋಷ್ಟಿಯಲ್ಲಿ ಪ್ರಧಾನ ಕಾರ್ಯದರ್ಶಿ ಎಂ.ಕೆ. ಸಿನಾನ್ ಸಖಾಫಿ, ಮಸೀದಿಯ ಧರ್ಮಗುರು ಪಿ.ಎಸ್. ತ್ವಾಹಾ ಸಅದಿ, ಪ್ರಮುಖರಾದ ಇಬ್ರಾಹಿಂ ಜಿ. ಅಜಿಲಮೊಗರು, ಆದಂ ಕುಂಞ ನಡುಮೊಗರು ಇದ್ದರು.