Sunday, April 20, 2025
Google search engine

Homeಸ್ಥಳೀಯಬದುಕಿನ ಪದ್ಧತಿಗಳು ಪಂಚತಂತ್ರದಲ್ಲಿವೆ

ಬದುಕಿನ ಪದ್ಧತಿಗಳು ಪಂಚತಂತ್ರದಲ್ಲಿವೆ


ಮೈಸೂರು: ಆಹಾರ ಸಂಸ್ಕೃತಿಯಲ್ಲೂ ಸ್ವಾರಸ್ಯಗಳಿದ್ದವು. ಮಕ್ಕಳಿಗೆ ರಾಜನೀತಿ ಜತೆಗೆ ಹಲವು ಬಗೆಯ ಸ್ವಾರಸ್ಯಕರ ಅಧ್ಯಯನದೊಂದಿಗೆ ಮನುಷ್ಯ ಅನುಸರಿಬೇಕಾದ ಬದುಕಿನ ಪದ್ಧತಿಗಳು ಪಂಚತಂತ್ರದಲ್ಲಿವೆ ಎಂದು ಡಾ.ರಾ.ಗಣೇಶ್ (ಶತವಾಧಾನಿ) ತಿಳಿಸಿದರು.
ನಗರದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಮೈಸೂರು ವಿವಿ ಪ್ರಾಚ್ಯ ವಿದ್ಯಾ ಸಂಶೋಧನಾಲಯ ಹಾಗೂ ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಸಹಯೋಗದಲ್ಲಿ ನಡೆದ ಪಂಚತಂತ್ರದಲ್ಲಿನ ಸಾಂಸ್ಕೃತಿಕ ವಿಚಾರಗಳ ಕುರಿತು ಉಪನ್ಯಾಸ ನೀಡಿದ ಅವರು, ಹರಪ್ಪ-ಮೊಯೆಂಜೊದಾರೋ ಪ್ರಾಚೀನ ಕಾಲದಲ್ಲಿಯೇ ಭಾರತದ ಶ್ರೀಮಂತಿಕೆಯ ವೈಭವವನ್ನು ಪಂಚತಂತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದರು.
ಮಠ ಮಾನ್ಯಗಳು-ದೇವಸ್ಥಾನ, ಮನೆಗಳ ನಿರ್ಮಾಣಗಳು ಬಹಳ ವಿಶೇಷವಾಗಿ ವಿನ್ಯಾಸವಾಗಿದ್ದವು. ಕೇವಲ ಮಣ್ಣು, ಮರಗಳನ್ನು ಬಹಳಸಿಕೊಂಡು ಸಂಪ್ರದಾಯ ಬದ್ಧವಾಗಿ ನಿರ್ಮಿಸಿಕೊಳ್ಳುತ್ತಿದ್ದರು. ಆಭರಣಗಳ ವಿನ್ಯಾಸವೂ ಬಹಳ ಅಪರೂಪವಾಗಿತ್ತು. ಹರಗಿನ ಮೂಲಕ ಒಡವೆಗಳನ್ನು ತಯಾರಿಸಿ ಧರಿಸುತ್ತಿದ್ದರು ಎಂಬ ಉಲ್ಲೇಖವಿದೆ ಎಂದರು.
ಪ್ರಾಚೀನ ಕಾಲದ ಸಂಗೀತಾಭ್ಯಾಸದ ಮಹ್ವತ ಸಾರಲಾಗಿತ್ತು. ವೇಣು, ಮೃದಂಗ, ಹಾವಾಡಿಗರು ಬಳಸುತ್ತಿದ್ದ ಪುಂಗಿ ಇನ್ನೂ ಅನೇಕ ಸಾಧನ ಸಲಕರಣೆಗಳು ಬಳಕೆಯಲ್ಲಿದ್ದವು ಎನ್ನುವುದರ ಜತೆಗೆ ಸಂಗೀತದ ಸ್ವಾರಸ್ಯದ ಬಗ್ಗೆ ಉಲ್ಲೇಖವಿದೆ ಎಂದರು.
ಪುಣ್ಯವಂತರು ದೇಶ ವಿಭಜನೆ ಒಪ್ಪುವುದಿಲ್ಲ. ಈಗಲೂ ದೇಶಭಕ್ತರಲ್ಲಿ ಆ ನೋವಿದೆ. ಆದರೆ, ದೇಶ ವಿಭಜನೆಯ ನೋವನ್ನು ಅನುಭವಿಸಿದವರಿಗೆ ಸಂಕಟ ತಿಳಿಯುತ್ತಿಲ್ಲ. ಪಂಜಾಬ್-ಬಂಗಾಳವೇ ದ್ರೋಹ ಮಾಡುತ್ತಿವೆ. ಸಧ್ಯ ಮತ್ತಷ್ಟು ದೇಶ ವಿಭಜನೆಯಾಗುವ ಕಡೆಗೆ ಹೋಗಬೇಕೊ ಅಷ್ಟು ದೇಶದ್ರೋಹ, ದೇಶವಿಚಿತ್ರಕಾರಿ ಶಕ್ತಿಗಳೇ ಕೆರಳಿವೆ ಎಂದರು.
ಸನಾತನ ಧರ್ಮದಲ್ಲಿ ಸರ್ವರ ಹಿತ ಬಯಸುವ ಪರಂಪರೆಗೆ ಕ್ಷಯ ಆಗುವ ಸ್ಥಿತಿ ನಿರ್ಮಾಣವಾಗುತ್ತಿದೆ. ಸನಾತನ ಧರ್ಮವನ್ನು ಅನುಸರಿಸುವುದಕ್ಕಿಂತ ಬೇರೆ ಪುಣ್ಯವೊಂದಿಲ್ಲ. ಮುಂದಿನ ಪೀಳಿಗೆ ಇದನ್ನು ನೋಡಬೇಕು. ದೇಶ ಪ್ರೇಮ ಬೆಳಗಬೇಕು. ಇದು ನಮ್ಮ ಪಂಚತಂತ್ರದಲ್ಲಿದೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular