Saturday, April 19, 2025
Google search engine

Homeರಾಜ್ಯಸುದ್ದಿಜಾಲಕನಕದಾಸರು ಜಾತಿಗೆ ಸೀಮಿತರಲ್ಲ ನಾಡಿನ ಆಸ್ತಿ : ಗುರುಪಾದ ಸ್ವಾಮಿ

ಕನಕದಾಸರು ಜಾತಿಗೆ ಸೀಮಿತರಲ್ಲ ನಾಡಿನ ಆಸ್ತಿ : ಗುರುಪಾದ ಸ್ವಾಮಿ


ಮೈಸೂರು: ಕೃಷ್ಣರಾಜ ಯುವ ಬಳಗ ವತಿಯಿಂದ ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ ರವರ ನೇತೃತ್ವದಲ್ಲಿ ೫೩೬ನೇ
ಭಕ್ತ ಕನಕದಾಸರ ಜಯಂತಿಯ ಅಂಗವಾಗಿ ಸಾರ್ವಜನಿಕರಿಗೆ ಉಚಿತ ಎಳನೀರು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಎಳನೀರು ವಿತರಿಸಿ ಮಾತನಾಡಿದ ಕೆಪಿಸಿಸಿ ಕಾರ್ಯದರ್ಶಿ, ಹಾಗೂ ಮುಂಬರುವ ಲೋಕಸಭಾ ಚುನಾವಣೆಯ ಆಕಾಂಕ್ಷಿಯು ಆದ ಗುರುಪಾದ ಸ್ವಾಮಿ ಕನಕದಾಸರು ಒಂದು ಜಾತಿಗೆ ಸೀಮಿತರಲ್ಲ ನಾಡಿನ ಆಸ್ತಿ ಶ್ರೇಷ್ಠ ಗ್ರಂಥಗಳ ಪುಸ್ತಕಗಳಿರುವ ಪ್ರಮುಖ ವಿಷಯಗಳನ್ನು ತಿಳಿಯಬೇಕಾದರೆ ಪ್ರತಿಯೊಬ್ಬರು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು.

ಸಮಾಜದ ಅಭಿವೃದ್ಧಿಗೆ ಅಗತ್ಯವಾದ ಬೇಕಾದ ಅಂಶಗಳು ಗ್ರಂಥಗಳಲ್ಲಿ ಹಾಗೂ ಪುಸ್ತಕಗಳಲ್ಲಿ ಇರುತ್ತವೆ . ಅದರಿಂದ ಎಲ್ಲರೂ ಓದಿ ಜ್ಞಾನ ಪಡೆದುಕೊಳ್ಳಬೇಕು ಜ್ಞಾನಕ್ಕೆ ಹೆಚ್ಚು ಒತ್ತು ನೀಡಬೇಕು. ಆಗ ಮಾತ್ರ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪಗೊಳ್ಳಲು ಸಾಧ್ಯವಾಗುತ್ತದೆ ,ಕನಕದಾಸರು ಕನ್ನಡ ನಾಡಿನ ಬಹುದೊಡ್ಡ ಆಸ್ತಿ ,ಕನಕದಾಸರು ದೊಡ್ಡ ವ್ಯಕ್ತಿಯಾಗಿದ್ದಾರೆ, ಅವರು ಜ್ಞಾನದಿಂದ ಜಾತಿ -ಮತಗಳನ್ನು ಮೀರಿ ನಿಂತವರು ,ಹಾಗಾಗಿ ಪ್ರತಿಯೊಬ್ಬರೂ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಕನಕದಾಸರ ಕೀರ್ತನೆಗಳು ಕನ್ನಡದ ಅತಿ ಶ್ರೇಷ್ಠ ಕೀರ್ತನೆಗಳು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಕನಕದಾಸರು ಕವಿಯೂ ಹೌದು ಅವರು ಸಂಚಾರಿ ಶಾ೦ತ ಎಂದು ಬಣ್ಣಿಸಿದರು.

ಇದೆ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಗುರುಪಾದ್ ಸ್ವಾಮಿ, ನಾಡನಹಳ್ಳಿ ರವಿ, ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ವಿ ಬಿ ಹಲ್ಯಾಪ್ರಭುಸ್ವಾಮಿ, ಅಭಿ , ಬಸವರಾಜು, ಥಿ ಎ ನವೀನ್ ಕುಮಾರ್, ಐ ಐ ಐಸೋಮಶೇಖರ್, ಊiಟಿಞಚಿಟ ರಾಜಣ್ಣ, ಬಿಎಸ್‌ಎನ್‌ಎಲ ಮಹದೇವಣ್ಣ, ಶಿವಕುಮಾರ್, ನವೀನ್ ಕೆಪಿ ಕಂಸಾಳೆ ರವಿ, ಬಾಲಕೃಷ್ಣ, ಮಾದೇಗೌಡ, ರಾಜು, ಪುರುಷೋತ್ತಮ್, ಹಾಗೂ ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular