Sunday, April 20, 2025
Google search engine

Homeರಾಜ್ಯಸುದ್ದಿಜಾಲಸಚಿವ ಸಂತೋಷ್ ಲಾಡ್ ರಿಂದ ವಿದ್ಯಾರ್ಥಿಗಳಿಗೆ ಅಭಿನಂದನೆ

ಸಚಿವ ಸಂತೋಷ್ ಲಾಡ್ ರಿಂದ ವಿದ್ಯಾರ್ಥಿಗಳಿಗೆ ಅಭಿನಂದನೆ

ಧಾರವಾಡ: ಕೊಧಾರವಾಡ ಜಿಲ್ಲಾ ಕ್ರೀಡಾ ಶಾಲೆಯ ಡಿ.ಹಾಕಿ ಕ್ರೀಡಾಪಟುಗಳು ಪ್ರಥಮ ಸ್ಥಾನ ಪಡೆದರು. ವಿಜೇತ ಕ್ರೀಡಾಪಟುಗಳು ಡಿ.28, 2023 ರಿಂದ ಮಧ್ಯಪ್ರದೇಶ ರಾಜ್ಯದ ಗ್ವಾಲಿಯರ್‌ನಲ್ಲಿ ಆಯೋಜಿಸಲಾದ ರಾಷ್ಟ್ರ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಾರೆ. ಇಂದಿನ ಜಿಲ್ಲಾ ಜನತಾ ದರ್ಶನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಯ್ ಲಾಡ್ ಕ್ರೀಡಾ ಸಲಕರಣೆಗಳ ಕಿಟ್ ವಿತರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪಂಚಾಯಿತಿ ಸಿಇಒ ಸ್ವರೂಪ ಟಿ.ಕೆ., ಎಸ್.ಪಿ.ಡಾ.ಗೋಪಾಲ ಬ್ಯಾಕೋಡ, ಮಹಾನಗರ ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸದಾನಂದ ಅಮರಾಪುರ, ಹಾಕಿ ತರಬೇತುದಾರ ಚಂದ್ರಶೇಖರ ನಾಯ್ಕರ್, ವ್ಯವಸ್ಥಾಪಕ ಎಸ್.ಜಿ.ಭಾವಿಕಟ್ಟಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು. ಪ್ರಸ್ತುತ. ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳು: ಪೂಜಾ ಧಾರವಾಡ, ಶ್ರುತಿ ಪೂಜಾರಿ, ರಾಜೇಶ್ವರಿ ಬೂದನ್ನವರ, ಶಿಲ್ಪಾ ಕಣಜವರ, ಪ್ರೀತಿ ನೀಲಗಡ್ಡಿ, ಸಂಜನಾ ಹುಗೇನವರ, ಬಸಮ್ಮ ಹುಗೇನವರ, ಸುಕನ್ಯಾ ಜಕ್ಕಣ್ಣವರ, ನಿಶ್ಚಿತ ನಾಯ್ಕರ, ಸೌಂದರ್ಯ ಲಮಾಣಿ.

RELATED ARTICLES
- Advertisment -
Google search engine

Most Popular