ಗುಂಡ್ಲುಪೇಟೆ: ತಾಲೂಕಿನ ಬೊಮ್ಮಲಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಎಲ್ಲಾ ೯ ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಶೀಲರಾಗುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.
ಬೊಮ್ಮಲಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಗಂಗಾಧರಸ್ವಾಮಿ, ಗವಿಯಮ್ಮ, ಚನ್ನಾಜಮ್ಮ, ಬಸವಣ್ಣಮ್ಮ, ಮುದ್ದಪ್ಪ, ವೃಷಬೇಂದ್ರ, ವಿಶ್ವನಾಥ್, ವಿಶ್ವಾಸ್, ಶ್ರೀಕಂಠಸ್ವಾಮಿ ಗೆಲುವು ಸಾಧಿಸುವ ಮೂಲಕ ಜಯಶೀಲರಾಗಿದ್ದಾರೆ. ಚುನಾವಣಾ ಅಧಿಕಾರಿಯಾಗಿ ಚಾಮರಾಜನಗರ ಸಿಡಿಓ ಸಹಾಯಕ ಅಭಿವೃದ್ಧಿ ಅಧಿಕಾರಿ ಡಿ.ಎ.ಸುರೇಶ್ ಕರ್ತವ್ಯ ನಿರ್ವಹಿಸಿದರು.
ಈ ವೇಳೆ ಬೊಮ್ಮಲಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ೯ ಮಂದಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಬೆಂಬಲಿಗರು, ಮುಖಂಡರು ಹೂವಿನ ಹಾರ ಹಾಕಿ ಅಭಿನಂದನೆ ತಿಳಿಸಿದರು.
ಈ ಸಂದರ್ಭದಲ್ಲಿ ಬೊಮ್ಮಲಾಪುರ ಗ್ರಾಪಂ ಸದಸ್ಯ ಗೋವಿಂದು, ಶ್ರೀನಿವಾಸ್, ನಂದೀಶ್, ಶೆಟ್ಟಹಳ್ಳಿ ವೀರಪ್ಪ, ಅಂಕಹಳ್ಳಿ ರಾಜಶೇಖರ್, ಸೋಮಣ್ಣ, ಬೆಳವಾಡಿ ವೆಂಕಟೇಶ್, ಹುಂಡೀಪುರ ಯೋಗೀಶ್, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಎಂ.ಪ್ರಣಯ್, ಮುಖಂಡರಾದ ಮಹದೇವಪ್ಪ, ಬಸಪ್ಪ, ರವಿ, ನಂದೀಶ್, ವಡೆಯನಪುರ ನಾಗೇಂದ್ರ, ಸುರೇಶ್ ಸೇರಿದಂತೆ ಇತರರು ಹಾಜರಿದ್ದರು.