ಕೆ.ಆರ್ ನಗರ : ತಾಲೂಕಿನ ಬಸವರಾಜಪುರ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯು ಸುಸೂತ್ರವಾಗಿ ನಡೆಯುವ ಮೂಲಕ ಬಹು ದಿನಗಳಿಂದ ಸದಸ್ಯರ ಒತ್ತಾಯಕ್ಕೆ ಕೊನೆಗೂ ಜಯಾ ಸಿಕ್ಕಿದಂತಾಗಿದೆ. ಹಾಲು ಉತ್ಪಾದಕರ ಸಹಕಾರ ಸಂಘ ಬಸವರಾಜ ಪುರದಲ್ಲಿ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಅವಿರೋಧವಾಗಿ ಆಯ್ಕೆ ಮಾಡುತ್ತಾ ಬಂದಿದ್ದು ಎಲ್ಲಾ ಸದಸ್ಯರು ಒಮ್ಮತದಿಂದ ಅವಿರೋಧ ಆಯ್ಕೆ ಬೇಡ ಸದಸ್ಯರಿಂದ ನೇರವಾಗಿ ಚುನಾಯಿತರಾಗಿ ಆಯ್ಕೆ ಮಾಡುವಂತೆ ಸಹಕಾರ ಇಲಾಖೆಗೆ ಒತ್ತಾಯ ಮಾಡಿದ ಮೇರೆಗೆ ಇಂದು ಜಿಲ್ಲಾ ಸಹಕಾರ ಇಲಾಖೆಯ ಹಿರಿಯ ನಿರೀಕ್ಷೆಕ ಬಿ ರಾಜು ಚುನಾವಣಾ ಅಧಿಕಾರಿಯಾಗಿ ಬಸವರಾಜಪುರ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಇಂದು ಚುನಾವಣೆಯನ್ನು ನಡೆಸಲಾಯಿತು.
ಒಟ್ಟು 110 ಸದಸ್ಯರಿದ್ದ ಸಂಘದಲ್ಲಿ 108 ಜನ ಮತ ಚಲಾವಣೆ ಮಾಡಿದರೆ ಇಬ್ಬರು ಮತದಾನದಲ್ಲಿ ಭಾಗವಹಿಸಿರಲಿಲ್ಲ. ಚುನಾವಣೆಯಲ್ಲಿ 18 ಜನ ಆಕಾಂಕ್ಷಿಗಳು ಅದೃಷ್ಟ ಪರೀಕ್ಷೆ ಒಡ್ಡಿದರೆ ಹಿಂದುಳಿದ ವರ್ಗ ಬಿ ಯಿಂದ ಜಯಶೀಲ ಪರಿಶಿಷ್ಟ ಜಾತಿಯಿಂದ ಚಂದ್ರಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದರು.
ಇನ್ನುಳಿದಂತೆ ಚುನಾವಣೆಯಲ್ಲಿ ಭಾಗವಹಿಸಿದ 18 ಜನರಲ್ಲಿ ಎಂಟು ಕ್ಷೇತ್ರಗಳಿಗೆ ಚುನಾವಣೆ ನಡೆದು ಆಯ್ಕೆಯಾದವರ ವಿವರ ಇಂತಿದೆ…ಕುಮಾರಸ್ವಾಮಿ ಸಿ 75 ಮತ, ರಮೇಶ ಬಿಇ 72, ರಾಜೇಗೌಡ 70 ,ರಾಮಕೃಷ್ಣ 65 ,ರಾಜೇಗೌಡ 64 ,ಮಹಾದೇವ 62, ರೇಣುಕಾ 66, ಸುನಂದಮ್ಮ 61 ಮತಗಳನ್ನು ಪಡೆದು ಆಯ್ಕೆಗೊಂಡರೆ ,ಇವರ ವಿರುದ್ಧ ಸ್ಪರ್ಧಿಸಿದ್ದ 10 ಜನ ಪರಾಭವಗೊಂಡರು
ಚುನಾವಣೆಯ ನಂತರ ಚುನಾವಣಾ ಅಧಿಕಾರಿ ರಾಜು ಬಿ ಚುನಾಯಿತರನ್ನು ಘೋಷಣೆ ಮಾಡಿದರೆ ಚುನಾವಣೆಯಲ್ಲಿ ಕಾರ್ಯದರ್ಶಿ ಇಂದ್ರೇಶ್ ಗೌಡ ,ಹಾಲು ಪರೀಕ್ಷೆಕ ಜೀವನ್ ,ಸಹಾಯಕ ರೋಹಿತ್ ಸಹಾಯ ಮಾಡಿದರು. ಚುನಾವಣೆ ಮುಗಿಯುತ್ತಿದ್ದಂತೆ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರವಿ ಮತ್ತು ಸಂಪತ್ ಸ್ವಾಮಿ ಗೌಡರ ನೇತೃತ್ವದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ವಿಜಯೋತ್ಸವವನ್ನು ಆಚರಿಸಿದರು.