Saturday, April 19, 2025
Google search engine

Homeರಾಜ್ಯಮಿಷನ್ ೨೦೨೪ ಕ್ಕೆ ಸಜ್ಜಾಗುವಂತೆ ಕಾರ್ಯಕರ್ತರಿಗೆ ಪ್ರಧಾನಿ ನರೇಂದ್ರ ಮೋದಿಕರೆ

ಮಿಷನ್ ೨೦೨೪ ಕ್ಕೆ ಸಜ್ಜಾಗುವಂತೆ ಕಾರ್ಯಕರ್ತರಿಗೆ ಪ್ರಧಾನಿ ನರೇಂದ್ರ ಮೋದಿಕರೆ

ಬೆಂಗಳೂರು: ಲೋಕಸಭಾ ಚುನಾವಣೆಗೆ ತಯಾರಿ ನಡೆಸುವಂತೆ, ಮಿಷನ್ ೨೦೨೪ ಕ್ಕೆ ಸಜ್ಜಾಗುವಂತೆ ಕಾರ್ಯಕರ್ತರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ದೆಹಲಿಯ ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳ ಎರಡು ದಿನಗಳ ಸಭೆಯಲ್ಲಿ ಮೋದಿ ಈ ಕರೆ ನೀಡಿದ್ದಾರೆ. ಮಹಿಳೆಯರು, ಯುವಕರು, ರೈತರು ಮತ್ತು ಬಡವರನ್ನ ದೇಶಾದ್ಯಂತ ಪಕ್ಷದೊಂದಿಗೆ ಸಂಪರ್ಕಿಸಲು ಬಿಜೆಪಿ ಅಭಿಯಾನ ನಡೆಸಲಿದೆ. ಜತೆಗೆ ಮೋದಿ ಅವರು ಜನವರಿಯಲ್ಲಿ ದೇಶಾದ್ಯಂತ ಯುವಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಬೂತ್ ಮಟ್ಟದಲ್ಲಿ ಪ್ರತಿಯೊಬ್ಬ ಮತದಾರರೊಂದಿಗೆ ಸಂಪರ್ಕದಲ್ಲಿರಲು ಬಿಜೆಪಿ ಕಾರ್ಯಕರ್ತರಿಗೆ ಸೂಚಿಸಲಾಗಿದೆ. ಕಾರ್ಯಕರ್ತರು ಆಯಾ ಬೂತ್‌ಗಳ ಮತದಾರರ ಮನೆಗಳಿಗೆ ಹೋಗಿ ಅವರನ್ನ ಭೇಟಿ ಮಾಡಬೇಕು ಎಂದು ಹೇಳಲಾಗಿದೆ.

RELATED ARTICLES
- Advertisment -
Google search engine

Most Popular