Saturday, April 19, 2025
Google search engine

Homeರಾಜ್ಯಸುದ್ದಿಜಾಲಹಿಜಾಬ್‌ಗೆ ಮತ್ತೆ ಅವಕಾಶ ನೀಡದಿರಿ: ಕಲ್ಲಡ್ಕ ಪ್ರಭಾಕರ ಭಟ್‌​

ಹಿಜಾಬ್‌ಗೆ ಮತ್ತೆ ಅವಕಾಶ ನೀಡದಿರಿ: ಕಲ್ಲಡ್ಕ ಪ್ರಭಾಕರ ಭಟ್‌​

ಮಂಡ್ಯ: ಶಾಲೆ–ಕಾಲೇಜುಗಳಲ್ಲಿ ಹಿಜಾಬ್‌ ನಿಷೇಧ ಆದೇಶ ಹಿಂಪಡೆಯುವುದು ಪ್ರಜಾಪ್ರಭುತ್ವ ವಿರೋಧಿ ನಡೆ. ಮಕ್ಕಳಲ್ಲಿ ಮತ್ತೆ ಪ್ರತ್ಯೇಕತೆಯ ಬೀಜ ಬಿತ್ತಬೇಡಿ ಎಂದು ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಶ್ರೀರಂಗಪಟ್ಟಣದಲ್ಲಿ ಭಾನುವಾರ ಹಿಂದೂ ಜಾಗರಣಾ ವೇದಿಕೆಯು ಆಯೋಜಿಸಿದ್ದ ಹನುಮಾನ್ ಮಾಲೆ ವಿಸರ್ಜನೆ ಮತ್ತು ಸಂಕೀರ್ತನಾ ಯಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಿಜಾಬ್ ವಿರುದ್ಧ ಇರಾನ್, ಇರಾಕ್‌ನಲ್ಲಿ ಅಲ್ಲಿನ ಮುಸ್ಲಿಂ ಮಹಿಳೆಯರೇ ಪ್ರತಿಭಟನೆ ನಡೆಸಿದ್ದಾರೆ. ಹೀಗಿರುವಾಗ ನಮ್ಮಲ್ಲಿ ಹಿಜಾಬ್‌ ಪರ ಸರ್ಕಾರ ನಿರ್ಣಯ ತಾಳುತ್ತಿರುವುದು ಸರಿಯಲ್ಲ. ಸಮವಸ್ತ್ರ ವಿರೋಧಿಸುವವರು ಬೇಕಾದರೆ ವಿದೇಶಗಳಿಗೆ ಹೋಗಲಿ. ನೀವು ಹಿಜಾಬ್ ಧರಿಸಿ ಕಾಲೇಜಿಗೆ ಬಂದರೆ ನಮ್ಮ ಮಕ್ಕಳು ಕೇಸರಿ ಶಾಲು, ಟೋಪಿ ಧರಿಸಿ ಬರುತ್ತಾರೆ. ನೀವು ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದರೆ ನಾವು ಜೈಶ್ರೀರಾಂ ಘೋಷಣೆ‌ ಕೂಗುತ್ತೇವೆ ಎಂದರು.

ಸಂಕೀರ್ತನಾ ಯಾತ್ರೆ ಅಂಗವಾಗಿ ಶ್ರೀರಂಗಪಟ್ಟಣದ ನಿಮಿಷಾಂಬ ದೇಗುಲ ಬಳಿಯ ಆಂಜನೇಯಸ್ವಾಮಿ ದೇವಾಲಯದಿಂದ ರಂಗನಾಥಸ್ವಾಮಿ ದೇಗುಲದವರೆಗೆ ನಡೆದ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡರು. ನಂತರ ಮಾಲೆ ವಿಸರ್ಜನೆ ಕಾರ್ಯ ನಡೆಯಿತು.

RELATED ARTICLES
- Advertisment -
Google search engine

Most Popular