Sunday, April 20, 2025
Google search engine

Homeರಾಜ್ಯಸುದ್ದಿಜಾಲಪ್ರತಿಭಟನೆಯ ನಡುವೆಯೂ ಹಾಲ ಉತ್ಪಾದಕರ ಸಹಕಾರ ಸಂಘಕ್ಕೆ ನಿರ್ದೇಶಕರ ಆಯ್ಕೆ

ಪ್ರತಿಭಟನೆಯ ನಡುವೆಯೂ ಹಾಲ ಉತ್ಪಾದಕರ ಸಹಕಾರ ಸಂಘಕ್ಕೆ ನಿರ್ದೇಶಕರ ಆಯ್ಕೆ

ಯಳಂದೂರು: ತಾಲೂಕಿನ ಅಂಬಳೆ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರ ಆಯ್ಕೆ ಸಂಬಂಧ ಭಾನುವಾರ ನಡೆದ ಚುನಾವಣೆ ಪ್ರಕ್ರಿಯೆ ಕೆಲ ಗ್ರಾಮಸ್ಥರು ಹಾಗೂ ಹಾಲು ಉತ್ಪಾದಕರ ವಿರೋಧದ ನಡುವೆಯೂ ಅಂತಿಮವಾಗಿ ನಿರ್ದೇಶಕರನ್ನು ಆಯ್ಕೆ ಮಾಡುವ ಚುನಾವಣಾ ಪ್ರಕ್ರಿಯೆ ನಡೆಯಿತು.

ಒಟ್ಟು ೧೩ ನಿರ್ದೇಶಕರ ಪೈಕಿ ೧೨ ಮಂದಿ ಅವಿರೋಧವಾಗಿ ಆಯ್ಕೆಯಾದರು. ಬಿಸಿಎಂ ಎ ಗೆ ಸೇರಿದ ಸ್ಥಾನಕ್ಕೆ ಯಾರೂ ಅರ್ಜಿ ಸಲ್ಲಿಸ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಜಿಯಾವುಲ್ಲಾ ಈ ಸ್ಥಾನ ಖಾಲಿಯಾಗಿರುವುದಾಗಿ ಘೋಷಣೆ ಮಾಡಿದರು.
ಈ ಸಂಘದಲ್ಲಿ ಒಟ್ಟು ೧೧೨ ಮಂದಿ ಸದಸ್ಯರಿದ್ದಾರೆ. ಆದರೆ ಇಲ್ಲಿನ ಕಾರ್ಯದರ್ಶಿ ಕೇವಲ ೩೨ ಮಂದಿ ಮಾತ್ರ ಅರ್ಹ ಮತದಾರರು ಇದ್ದಾರೆ ಎಂದು ನಮೂದಿಸಿದ್ದಾರೆ. ಚುನಾವಣಾ ಪ್ರಕ್ರಿಯೆಯ ಮಾಹಿತಿಯನ್ನು ನೀಡಿಲ್ಲ. ತಮಗಿಷ್ಟ ಬಂದ ವ್ಯಕ್ತಿಗಳನ್ನು ಇದಕ್ಕೆ ಆಯ್ಕೆ ಮಾಡಿಕೊಂಡು ಮೋಸ ನಡೆಸಿದ್ದಾರೆ. ಹಾಗಾಗಿ ಈ ಚುನಾವಣೆಯನ್ನು ಮುಂದೂಡಬೇಕೆಂದು ಶನಿವಾರ ಪ್ರತಿಭಟನೆ ನಡೆಸಿದ್ದರು. ಭಾನುವಾರ ಚುನಾವಣಾ ದಿನವೂ ರೈತ ಸಂಘದ ಸದಸ್ಯರೊಡಗೂಡಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ಈ ಸಂಘದಲ್ಲಿ ಸದಸ್ಯರಿಗೆ ಮಾಹಿತಿ ನೀಡದೆ ಚುನಾವಣೆ ನಡೆಸಲಾಗುತ್ತಿದೆ. ಬೇಕೆಂತಲೇ ಕೆಲ ಸದಸ್ಯರನ್ನು ಅನರ್ಹಗೊಳಿಸಲಾಗಿದೆ, ಈ ಬಗ್ಗೆ ಇಲ್ಲಿನ ಕಾರ್ಯದರ್ಶಿ ಲೋಪವೆಸಗಿದ್ದಾರೆ. ತರಾತುರಿಯಲ್ಲಿ ಬೇಕೆಂತಲೇ ಚುನಾವಣಾ ದಿನಾಂಕ ನಿಗಧಿಗೊಳಿಸಿ ಹಾಗಾಗಿ ಈ ಚುನಾವಣೆಯನ್ನು ಮುಂದೂಡಬೇಕು ಎಂಬುದು ಇಲ್ಲಿನ ಸಂಘದ ಸದಸ್ಯರ ಆಗ್ರಹವಾಗಿದೆ ಎಂದರು.

ಯಶಸ್ವಿಯಾಗಿ ನಡೆದ ಸಂಧಾನ: ಪ್ರತಿಭಟನಾಕಾರರು ಹಾಗೂ ಆಡಳಿತ ಮಂಡಳಿಯ ಕಾರ್ಯದರ್ಶಿ ಪುಟ್ಟಬುದ್ದಿ ಹಾಗೂ ಅಧ್ಯಕ್ಷ ಅಂಬಳೆ ಶಿವಾನಂದಸ್ವಾಮಿ ಪೊಲೀಸ್ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಈ ಚುನಾವಣಾ ಪ್ರಕ್ರಿಯೆಯ ಸಮಯದಲ್ಲಿ ಕೆಲವು ಸಮಸ್ಯೆಗಳು ಎದುರಾಗಿವೆ. ಇದಕ್ಕೆ ಸಂಬಂಧಪಟ್ಟಂತೆ ಮುಂದಿನ ದಿನಗಳಲ್ಲಿ ಇದನ್ನು ಸರಿದೂಗಿಸಿಕೊಂಡು ಹೋಗುತ್ತೇವೆ. ದಯವಿಟ್ಟು ಎಲ್ಲಾ ಸದಸ್ಯರು ನಿಗಧಿತ ಸಮಯದಂದು ಸಭೆಗಳಿಗೆ ಹಾಜರಾಗಿ ತಮ್ಮ ಅಭಿಪ್ರಾಯವನ್ನು ತಿಳಿಸಬೇಕು. ಈ ಚುನಾವಣೆ ಪ್ರಕ್ರಿಯೆಗೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

೧೨ ನಿರ್ದೇಶಕರ ಆಯ್ಕೆ: ಈ ಚುನಾವಣಾ ಪ್ರಕ್ರಿಯೆಯಲ್ಲಿ ಒಟ್ಟು ೧೩ ಮಂದಿ ನಿರ್ದೇಶಕರ ಆಯ್ಕೆಗೆ ಅವಕಾಶವಿತ್ತು. ಇದರಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲಿದ್ದ ೭ ಸ್ಥಾನಗಳಿಗೆ ನಾಗರಾಜು, ಬಿ. ಮಹದೇವಸ್ವಾಮಿ, ಮಲ್ಲಪ್ಪ, ಶಿವಸ್ವಾಮಿ, ನಿಂಗಣ್ಣ, ಸುಬ್ಬಣ್ಣ, ಬಸವಣ್ಣ ಪರಿಶಿಷ್ಟ ಜಾತಿಗೆ ಬಿ. ರಾಚಯ್ಯ, ಪರಿಶಿಷ್ಟ ಪಂಗಡಕ್ಕೆ ರಂಗನಾಯಕ, ಮಹಿಳೆಗೆ ಮೀಸಲಾಗಿದ್ದ ಸ್ಥಾನಕ್ಕೆ ರಾಜಮ್ಮ, ಮಂಗಳಮ್ಮ ಹಿಂದುಳಿದ ಬಿ. ವರ್ಗಕ್ಕೆ ಎಂ. ಶಿವಾನಂದಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಿಂದುಳಿದ ವರ್ಗ ಎ ಗೆ ಮೀಸಲಾಗಿದ್ದ ಸ್ಥಾನಕ್ಕೆ ಅಭ್ಯರ್ಥಿ ಇಲ್ಲದ ಕಾರಣ ಈ ಸ್ಥಾನವನ್ನು ಖಾಲಿಯಾಗಿ ಬಿಟ್ಟಿರುವುದಾಗಿ ಚುನಾವಣಾಧಿಕಾರಿ ಜಿಯಾವುಲ್ಲಾ ಘೋಷಣೆ ಮಾಡಿದರು. ಸರ್ಕಲ್ ಇನ್ಸ್‌ಪೆಕ್ಟರ್ ಶಿವರಾಜ್ ಮುಧೋಳ್ ಸಬ್ ಇನ್ಸ್‌ಪೆಕ್ಟರ್ ಚಂದ್ರಹಾಸನಾಯಕ್, ರೈತ ಸಂಘದ ಅಂಬಳೆ ಶಿವಕುಮಾಸ್ವಾಮಿ, ಸನತ್‌ಕುಮಾರ್, ಮಾಜಿ ಅಧ್ಯಕ್ಷ ಪ್ರಭುಸ್ವಾಮಿ, ಸೇರಿದಂತೆ ಗ್ರಾಮದ ಮುಖಂಡರು, ಸಹಕಾರ ಸಂಘದ ಕೆಲ ಸದಸ್ಯರು ಇದ್ದರು.

RELATED ARTICLES
- Advertisment -
Google search engine

Most Popular