Monday, April 21, 2025
Google search engine

Homeಸ್ಥಳೀಯಕನಕದಾಸರನ್ನು ಕೇವಲ ಒಂದು ಜಾತಿಗೆ ಸೀಮಿತ ಮಾಡದಿರಿ: ಶಾಸಕ ಡಿ‌.ರವಿಶಂಕರ್

ಕನಕದಾಸರನ್ನು ಕೇವಲ ಒಂದು ಜಾತಿಗೆ ಸೀಮಿತ ಮಾಡದಿರಿ: ಶಾಸಕ ಡಿ‌.ರವಿಶಂಕರ್

ಕೆ.ಆರ್.ನಗರ :  ಕುಲ ಕುಲ ಕುಲವೆಂದು ಹೊಡೆದಾಡದಿರಿ  ಎಂದು ಕೀರ್ತನೆಗಳ ಮೂಲಕ ಜಾತ್ಯತೀತ ದಾರ್ಶನಿಕರಾಗಿ ಇತಿಹಾಸದಲ್ಲಿ ಉಳಿದ ಕನಕದಾಸರನ್ನು  ಕೇವಲ ಒಂದು ಜಾತಿಗೆ ಸೀಮಿತವಾಗಿ ಮಾಡದೇ ಮನುಕುಲದ ಉದ್ಧಾರಕ ಎಂದು ಭಾವಿಸಬೇಕು ಎಂದು ಶಾಸಕ ಡಿ‌.ರವಿಶಂಕರ್ ಹೇಳಿದರು

ಸಾಲಿಗ್ರಾಮ ತಾಲೂಕಿನ ತಾಲೂಕಿನ ಚಿಕ್ಕಕೊಪ್ಪಲು ಗ್ರಾಮದಲ್ಲಿ ನಡೆದ ಕನ್ನಡ ರಾಜ್ಯೋತ್ಸವ- ಸಂತ ಕವಿ ಕನಕದಾಸರ ಜಯಂತ್ಯೋತ್ಸವ ಮತ್ತು ವಿವಿಧ ಕ್ಷೇತ್ರದ ಸಾಧಕರಿಗೆ ಏರ್ಪಡಿಸಿದ್ದ   ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಜಾತಿ ವ್ಯವಸ್ಥೆಯನ್ನು‌500 ವರ್ಷಗಳ ಹಿಂದೆಯೇ ಹೋಗಲಾಡಿಸಲು ಶ್ರಮಿಸಿದ ಕನಕದಾಸರ ಆದರ್ಶಗಳನ್ನು ಅಳವಡಿಸಿ ಕೊಳ್ಳಬೇಕೆಂದರು

   ಕರ್ನಾಟಕ ಏಕೀಕರಣಗೊಂಡು ೫೦ ವರ್ಷ ಪೂರ್ಣಗೊಂಡಿರುವುದರಿಂದ ರಾಜ್ಯ ಸರ್ಕಾರ ಇಡೀ ವರ್ಷ ರಾಜ್ಯೋತ್ಸವ ಆಚರಿಸಲು ನಿರ್ಧರಿಸಿದ್ದು ಇದಕ್ಕೆ ಪ್ರತಿಯೊಬ್ಬರು ಕೈ ಜೋಡಿಸುವ ಮೂಲಕ ಕನ್ನಡ ಪ್ರೇಮವನ್ನು ಬೆಳಿಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.

ಎಲ್ಲಾ ಗ್ರಾಮಗಳಲ್ಲು ಸಾಕಷ್ಟು ಓದಿ ಉನ್ನತ ಹುದ್ದೆಯಲ್ಲಿದ್ದರು, ಹುಟ್ಟೂರು ಮರೆಯುತ್ತಿರುವ ಈ ದಿನಗಳಲ್ಲಿ ಮೈಸೂರು ಸಂಜೆ ವಿವಿ ಕಾಲೇಜಿನ ಪ್ರಾಧ್ಯಾಪಕ ಪ್ರೋ.ಸಿ.ಡಿ.ಪರುಶುರಾಮ್ ಅವರು ಹುಟ್ಟೂರಿನಲ್ಲಿ ವಾಚನಾಲಯ ತೆರೆದು ವಿದ್ಯಾರ್ಥಿಗಳಿಗೆ ಬೇಕಾಗುವ ಶಿಕ್ಷಣ ಪುಸ್ತಕಗಳನ್ನು ಒದಗಿಸಿ ಅವರಿಗೆ ಶಿಕ್ಷಣ ಕಲಿಸಿ ಕೊಡುವ ಪ್ರಯತ್ನವನ್ನು ಯಾವುದೇ ಪ್ರಚಾರ ಇಲ್ಲದೇ ಮಾಡಿ ಮತ್ತು ವಿವಿಧ ಕ್ಷೇತ್ರದಲ್ಲಿ  ಎಲೆ ಮರದ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವ  ಹತ್ತಾರು ಮಂದಿಯನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಮೂಲಕ ಮಾದರಿಯಾಗಿದ್ದು ಇವರ ಸೇವೆ ಬೇರೆಯವರಿಗೆ ಮಾರ್ಗದರ್ಶನವಾಗಲಿ ಎಂದು ಅಭಿಪ್ರಾಯ ಪಟ್ಟರು.

ಪ್ರಧಾನ ಭಾಷಣ ಮಾಡಿದ ಚಿತ್ರದುರ್ಗ ಜಿಲ್ಲೆಯ ಅಬಕಾರಿ ಉಪ ಆಯುಕ್ತ ಡಾ.ಬಿ.ಮಾದೇಶ್ ಮಾತನಾಡಿ ಕನಕದಾಸರ ಜಯಂತಿ ಆಚರಣೆ ಮಾಡಿದರೇ ಸಾಲದು ಅವರ ಕೀರ್ತನೆಗಳ ಬಗ್ಗೆ ಅಧ್ಯಯನ ಮಾಡಿ ಅದನ್ನು ಮುಂದಿನ ದಿನಗಳಲ್ಲು ಉಳಿಸಿ ಕೊಂಡು ಹೋಗುವ ಜವಬ್ದಾರಿ ಎಲ್ಲರ ಮೇಲಿದೆ ಎಂದು ಅಭಿಪ್ರಾಯಪಟ್ಟರು.

ಸಾಲಿಗ್ರಾಮ ತಾಲೂಕು ಕಸಾಪ ಅಧ್ಯಕ್ಷ ಎಸ್.ಕೆ.ಮಧುಚಂದ್ರ ಸಿ.ಎಚ್.ದೇವೇಗೌಡ ಉಚಿತ ವಾಚನಾಲಯದ ಕೇಂದ್ರದ 2024 ನೇ ಸಾಲಿನ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದರು ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು

ಈ ಸಂದರ್ಭದಲ್ಲಿ ರಾಜ್ಯ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ.ಸುಬ್ರಮಣ್ಯ,ತಾ.ಪಂ.ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಕೆ.ಆರ್.ನಗರ ಪತ್ರಕರ್ತರ ಸಂಘದ ಅಧ್ಯಕ್ಷ ವಿನಯ್ ದೊಡ್ಡಕೊಪ್ಪಲು, ಸಾಹಿತಿ ಕಲ್ಕುಣಿಕೆ ಮಹದೇವ್, ಕುಪ್ಪೆ ಗ್ರಾ.ಪಂ.ಅಧ್ಯಕ್ಷೆ ಗೀತಾ ದಿನೇಶ್, ಉಪಾಧ್ಯಕ್ಷೆ ಗೀತಾಕಾಂತರಾಜು, ಮಾಜಿ ಅಧ್ಯಕ್ಷರಾದ ತಿಮ್ಮೇಗೌಡ, ಗೌರಮ್ಮ,ಸದಸ್ಯೆ ರೇಖಾ ಉಮೇಶ್, ಮಾಜಿ ಸದಸ್ಯ ಚಂದ್ರಯ್ಯ, ಮಾಯಿಗೌಡನಹಳ್ಳಿ ಗ್ರಾ.ಪಂ‌.ಮಾಜಿ ಉಪಾಧ್ಯಕ್ಷ ಕುಮಾರಸ್ವಾಮಿ, ಕುಪ್ಪೆ ಸಹಕಾರ ಸಂಘದ ಅಧ್ಯಕ್ಷ ಸಿ.ಬಿ.ಸಂತೋಷ್, ಮಾಜಿ ಅಧ್ಯಕ್ಷರಾದ ಸಿ.ಟಿ.ಪಾರ್ಥ,ಕೆ.ಆರ್.ಮಂಜುನಾಥ್, ನೀರು ಬಳಕೆದಾರರ ಸಂಘದ ಅಧ್ಯಕ್ಷ ಸದಾಶಿವಕೀರ್ತಿ,  ಚಿಮುಕ ಬಳಗದ ಅಧ್ಯಕ್ಷ ಮುದ್ದನಹಳ್ಳಿ ಸೋಮಪ್ಪ ಮುಖಂಡರಾದ ಮನುರಾಜಣ್ಣ ಡಿ.ರಾಮಕೃಷ್ಣೇಗೌಡ, ನಿವೃತ್ತರಾದ ಶಿಕ್ಷಕ ಕುಪ್ಪೆ ಜವರೇಗೌಡ,ಹಿರಣ್ಣಯ್ಯ, ಚಂದ್ರಶೇಖರಯ್ಯ,ನಾಗರಾಜೇಗೌಡ, ಬೆಣಗನಹಳ್ಳಿ ಪಾರ್ಥ, ಕುಪ್ಪೆ‌ಮಹೇಂದ್ರ, ಸಾಲೇಕೊಪ್ಪಲು ರಂಗಸ್ವಾಮಿ, ಗಾರೇಗೌರ, ಸ್ವಾಮೀಗೌಡ, ದೊಡ್ಡಜವರನಾಯಕ, ಗುಡುಗನಹಳ್ಳಿ ಕರಿಯಯ್ಯ ಸೇರಿದಂತೆ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular