ಬೆಂಗಳೂರು: ನಾಡಪ್ರಭು ಕೆಂಪೇಗೌಡರ ಕೊಡುಗೆ ಕುರಿತು ವಿಚಾರ ಸಂಕಿರಣ ಹಾಗೂ ಕೆಂಪೇಗೌಡ ಕರ್ನಾಟಕ ಪ್ರಾದೇಶಿಕ ಸಾಂಸ್ಕೃತಿಕ ಉತ್ಸವ ಸಂದರ್ಭದಲ್ಲಿ, ೧೫ ವರ್ಷದೊಳಗಿನ ಗಂಡು ಮತ್ತು ಹೆಣ್ಣು ಮಕ್ಕಳಿಗಾಗಿ ಕರುನಾಡ ಕಣ್ಮಣಿ ಪ್ರಶಸ್ತಿಗಾಗಿ ವೇಷ ಭೂಷಣ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
ಕೆಂಪೇಗೌಡರು ಸೇರಿದಂತೆ, ಯಾವುದೇ ರಾಷ್ಟ್ರೀಯ ನಾಯಕರ ಹಾಗೂ ಐತಿಹಾಸಿಕ ಗಣ್ಯರ ವೇಷ ಧರಿಸಬಹುದು ಡಿ. ೩೧ರಂದು ವರ್ಷಾಂತ್ಯದ ಕೊನೆ ಹಾಗೂ ಹೊಸ ವರ್ಷದ ಸ್ವಾಗತದ ನೆನಪಿಗಾಗಿ ಈ ವೇಷ ಭೂಷಣ ಸ್ಪರ್ಧೆ ನಡೆಯಲಿದೆ. ಆಸಕ್ತ ಪೋಷಕರು ಮಗುವಿನ ಮಾಹಿತಿ, ವಿಳಾಸ, ದೂರವಾಣಿ ಹಾಗೂ ೨ ಭಾವುಚಿತ್ರದೊಂದಿಗೆ, ದಿನಾಂಕ ಡಿ. ೩೦ ರೊಳಗೆ ತಮ್ಮ ಮಗುವಿನ ಮನವಿ ಅಥವಾ ಅರ್ಜಿ ನೀಡಬಹುದು.
೧ ಪುಟದ ಮಾಹಿತಿ ಫೋಟೋದೊಂದಿಗೆ ರವೀಂದ್ರ ಕಲಾಕ್ಷೇತ್ರದ ಕ್ಯಾಂಟಿನ್ ಅಥವಾ ನಮ್ಮ ಕಛೇರಿಯಲ್ಲಿ ನೀಡಬಹುದಾಗಿದೆ. ಭಾಗವಹಿಸಿದ ಮಕ್ಕಳಿಗೆ ಸುಂದರವಾದ ಪ್ರಶಸ್ತಿ ಪತ್ರ ಮತ್ತು ಬ್ಯಾಡ್ಜ್ ಹಾಗೂ ಫೋಟೋ ಶೂಟ್ ವ್ಯವಸ್ಥೆ ಮಾಡಲಾಗುತ್ತದೆ. (ಫೋಟೋ ಬೇಕಾದವರು ಬುಕ್ ಮಾಡಿಕೊಳ್ಳಿ) ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ತನ್ನ ೩೧ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ, ಈ ವೇಷ ಭೂಷಣ ಸ್ಪರ್ಧೆ ಹಮ್ಮಿಕೊಂಡಿದೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಹಿಂಭಾಗದಲ್ಲಿರುವ ಸಂಸ ಬಯಲು ರಂಗಮಂದಿರದಲ್ಲಿ ಈ ಶೋ ಸಂಜೆ ೪ ರಿಂದ ೭ ರವರೆಗೆ ನಡೆಯಲಿದೆ.
ಮನವಿಯನ್ನು ಡಿ. ೩೦ರಂದು ನಡೆಯುವ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುವ ಸಂಸ ರಂಗಮಂದಿರದ ಕೌಂಟರ್‌ನಲ್ಲಿ ೪ ರಿಂದ ೯ ರವರೆಗೆ ಅಥವಾ ರವೀಂದ್ರ ಕಲಾಕ್ಷೇತ್ರದ ಕ್ಯಾಂಟಿನ್ ತಲುಪಿಸಬಹುದೆಂದು ಸಂಸ್ಥೆಯ ಅಧ್ಯಕ್ಷ ರಮೇಶ ಸುರ್ವೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
